Publish Date: Thu, 20 Jun 2019 (09:44 IST)
Updated Date: Thu, 20 Jun 2019 (09:45 IST)
ಬೆಂಗಳೂರು : ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಮೊದಲ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಿದ್ದಾರೆ. ಈ ನಡುವೆ ಅವರ ಗ್ರಾಮವಾಸ್ತವ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸದಾನಂದ ಗೌಡರು ವ್ಯಂಗ್ಯ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಸದಾನಂದ ಗೌಡರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರೇ ಸಾಧ್ಯವಾದ್ರೆ ಈ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮಕ್ಕೆ ಭೇಟಿ ನೀಡಿ. ಆ ಗ್ರಾಮಗಳ ವಾಸ್ತವವನ್ನು ತಿಳಿದುಕೊಳ್ಳಿ ಎಂದು ವ್ಯಂಗ್ಯ ಮಾಡಿದ್ದಾರೆ.
ನೀವು ಗ್ರಾಮವಾಸ್ತವ್ಯಕ್ಕೆ ಶಾಲೆ ಆಯ್ಕೆ ಮಾಡಿಕೊಂಡಿದ್ದೀರಿ. ನೀವು ಶಾಲೆ ಆಯ್ಕೆ ಮಾಡಿಕೊಂಡಿದ್ದೇಕೆಂದು ಅರ್ಥವಾಯ್ತು. ಸುಳ್ಳು ಭರವಸೆ ಕೊಟ್ರೂ ಪ್ರಶ್ನಿಸೋರು ಇರಲ್ಲವೆಂಬ ವಿಶ್ವಾಸ. ಹೀಗಾಗಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೀರೆಂದು ಎಂದು ಅವರು ಸಿಎಂ ಕುಮಾರಸ್ವಾಮಿಯ ಕಾಲೆಳೆದಿದ್ದಾರೆ.