Publish Date: Thu, 20 Jun 2019 (08:53 IST)
Updated Date: Thu, 20 Jun 2019 (08:56 IST)
ಲಂಡನ್: ವಿಶ್ವಕಪ್ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಆದರೆ ಶಿಖರ್ ಧವನ್ ದುರಾದೃಷ್ಟ ನೋಡಿ. ಅತ್ಯುತ್ತಮ ಫಾರ್ಮ್ ನಲ್ಲಿರುವಾಗಲೇ ಧವನ್ ಗಾಯದಿಂದಾಗಿ ವಿಶ್ವಕಪ್ ನಿಂದಲೇ ಹೊರಬೀಳಬೇಕಾದ ಪರಿಸ್ಥಿತಿ ಬಂದಿದೆ.
ಇದೀಗ ವಿಶ್ವಕಪ್ ನಿಂದ ಹೊರ ನಡೆಯಬೇಕಾದ ಪರಿಸ್ಥಿತಿ ಧವನ್ ಗೆ ನಿಜಕ್ಕೂ ಬೇಸರ ತಂದಿರುತ್ತದೆ. ಈ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ಧವನ್ ಗೆ ಸಾಂತ್ವನ ಹೇಳಿದ್ದಾರೆ.
‘ಧವನ್ ಒಬ್ಬ ಫೈಟರ್. ಅವರು ಖಂಡಿತಾ ಲಯಕ್ಕೆ ಮರಳುತ್ತಾರೆ. ನಾನೂ ಹಿಂದೆ ಬೆರಳು ಮುರಿದಿದ್ದರೂ ಆಡಿದ್ದಿದೆ. ಒಬ್ಬ ಆಟಗಾರ ಇಂತಹ ಹಲವು ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ’ ಎಂದು ಸಚಿನ್ ಹೇಳಿದ್ದಾರೆ.