ಮಾದಕ ದ್ರವ್ಯದ ಗುಳಿಗೆಗಳನ್ನು ನುಂಗಿಕೊಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಕೆಐಎ) ಬಂದಿಳಿದ ನೈಜೀರಿಯಾ ಪ್ರಜೆಯನ್ನು ಆರ್ಥಿಕ ಗುಪ್ತಚರ ಇಲಾಖೆ (ಡಿಆರ್‍ಐ) ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿ ಆ. 19ರಂದು ದಕ್ಷಿಣ ಆಫ್ರಿಕದ ಜೋಹಾನ್ಸ್?ಬರ್ಗ್ ವಿಮಾನ ನಿಲ್ದಾಣದಿಂದ ದುಬೈಗೆ ಬಂದಿದ್ದ. ಅಲ್ಲಿಂದ ಕೆಐಎಗೆ ಬಂದಿಳಿದಿದ್ದ. ಈ ಕುರಿತು ಖಚಿತ ಮಾಹಿ
ತಿ ಪಡೆದ ಡಿಆರ್‍ಐ ಅಧಿಕಾರಿಗಳು, ಕೆಐಎಗೆ ತೆರಳಿ ದುಬೈಯಿಂದ ಬಂದಿಳಿದ ಪ್ರಯಾಣಿಕರ ಮಾಹಿತಿ ಕಲೆ ಹಾಕಿದ್ದರು. ಅದರಲ್ಲಿ ನೈಜೀರಿಯಾ ಮೂಲದ ಪ್ರಜೆ, ತನ್ನ ಏರ್‍ಟಿಕೆಟ್ ಪ್ಯಾಕೇಜ್‍ನಲ್ಲಿ ಉಚಿತ ಆಹಾರ, ನೀರು, ತಂಪುಪಾನಿಯ ಸೇವೆ ಇದ್ದರೂ ಯಾವುದನ್ನು ಸ್ವೀಕರಿಸದೆ ನಿರಾಕರಿಸಿದ್ದ. ಇದು ಡಿಆರ್‍ಐ ಅಧಿಕಾರಿಗಳಿಗೆ ಗೊತ್ತಾಗಿ, ಕೆಐಎಗೆ ವಿಮಾನ ಬಂದಿಳಿದ ಕೂಡಲೇ ನೈಜೀರಿಯಾ ಪ್ರಜೆಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಾರೆ. ಆದರೆ, ಮಾದಕ ದ್ರವ್ಯ ಪತ್ತೆ ಆಗುವುದಿಲ್ಲ. ಸ್ಕ್ಯಾನಿಂಗ್? ಮಾಡಿದಾಗ ಹೊಟ್ಟೆಯಲ್ಲಿ ಅನುಮಾನಾಸ್ಪದ ಗುಳಿಗೆ ಇರುವುದು ಗೊತ್ತಾಗಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.
ದಕ್ಷಿಣ ಆಫ್ರಿಕದಲ್ಲಿ ಅಪರಿಚಿತ ವ್ಯಕ್ತಿ, ಡ್ರಗ್ಸ್ ಗುಳಿಗೆ ನುಂಗಿಸಿ ದುಬೈ ಮಾರ್ಗವಾಗಿ ಬೆಂಗಳೂರಿಗೆ ಕಳುಹಿಸಿದ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದು, ಅಲ್ಲಿ ಉಳಿದುಕೊಳ್ಳಬೇಕು. ಆ ರೂಮ್‍ಗೆ ಅಪರಿಚಿತ ವ್ಯಕ್ತಿ ಬಂದು ಮೊಬೈಲ್ ಫೆÇೀನ್? ಕೊಡುತ್ತಾನೆ. ಅದಕ್ಕೊಂದು ಕರೆ ಬರಲಿದ್ದು, ಅದರಲ್ಲಿ ಬರುವ ಸೂಚನೆ ಪಾಲನೆ ಮಾಡಿದರೆ ನಿನ್ನ ಹೊಟ್ಟೆಯಲ್ಲಿ ಇರುವ ಡ್ರಗ್ಸ್ ಗುಳಿಗೆ ತೆಗೆದುಕೊಳ್ಳುತ್ತಾರೆ. ಆನಂತರ ಹಣ ನಿನಗೆ ಕೊಡಲಾಗುತ್ತದೆ. ಅಲ್ಲಿಯವರೆಗೂ ಎಲ್ಲ ಖರ್ಚು ವೆಚ್ಚವನ್ನು ಭರಿಸುವುದಾಗಿ ಹೇಳಿ ಕಳುಹಿಸಿರುವುದಾಗಿ ಪೆಡ್ಲರ್ ಬಾಯ್ಬಿಟ್ಟಿದ್ದ ಅಧಿಕಾರಿಗಳು ತಿಳಿಸಿದರು.
ಪೆಡ್ಲರ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ವೈದ್ಯರ ಸಹಾಯದಿಂದ ಹೊಟ್ಟೆಯಲ್ಲಿದ್ದ ಡ್ರಗ್ಸ್ ಗುಳಿಗೆ ತೆಗೆದಾಗ 11 ಕೋಟಿ ರೂ. ಮೌಲ್ಯದ 1.25 ಕೆಜಿ ಕೊಕೇನ್? ಪತ್ತೆಯಾಗಿದೆ ಎಂದು ಡಿಆರ್‍ಐ ಅಧಿಕಾರಿಗಳು ತಿಳಿಸಿದ್ದಾರೆ.