Publish Date: Sat, 02 May 2020 (21:49 IST)
Updated Date: Sat, 02 May 2020 (21:52 IST)
ಕಾಡಿನಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ.
ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಮೇಲೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದ ಕಾಮುಕನೊಬ್ಬ ಕಾಡಿನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸಂತಕಟ್ಟೆಯಿಂದ ಬ್ರಹ್ಮಾವರದ ಕುಂಜಾಲಿಗೆ ದಿನಸಿಗಾಗಿ ಮಹಿಳೆ ಬಂದಿದ್ದಳು. ವಾಪಸ್ ಹೋಗುತ್ತಿದ್ದಾಗ ಡ್ರಾಪ್ ಕೊಡುವ ನೆಪದಲ್ಲಿ ಕಾಮುಕ ಅತ್ಯಾಚಾರಕ್ಕೆ ಮುಂದಾಗಿದ್ದಾನೆ.
ಮಹಿಳೆ ಕೂಗಿಕೊಂಡಿದ್ದರಿಂದ ಬೈಕ್ ಸವಾರ ಪರಾರಿಯಾಗಿದ್ದಾನೆ. ಬ್ರಹ್ಮಾವರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.