Select Your Language

Notifications

webdunia
webdunia
webdunia
webdunia

ಕಲಬುರಗಿ ಕೊಂಚ ನಿರಾಳ : ಕೊರೊನಾ ಸೋಂಕಿನಿಂದ ನಾಲ್ವರು ಗುಣಮುಖ

ಕೊರೊನಾ ವೈರಸ್
ಕೊರೋನಾ ಸೋಂಕಿನಿಂದ ಗುಣಮುಖರಾದವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಕಲಬುರಗಿ ನಗರದ  ನಾಲ್ಕು ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್‌  ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ದರ್ಗಾ ಪ್ರದೇಶದ 10 ವರ್ಷದ ಬಾಲಕಿ (ರೋಗಿ ಸಂಖ್ಯೆ-254), ಖಾದ್ರಿ ಚೌಕ್ ಪ್ರದೇಶದ 32 ವರ್ಷದ ಯುವಕ(ರೋಗಿ ಸಂಖ್ಯೆ-314) ಹಾಗೂ ಮೋಮಿನಪುರ ಪ್ರದೇಶದ 5 ವರ್ಷದ ಗಂಡು ಮಗು(ರೋಗಿ ಸಂಖ್ಯೆ-315) ಮತ್ತು 13 ವರ್ಷದ ಬಾಲಕಿ(ರೋಗಿ ಸಂಖ್ಯೆ-392) ಇವರು ಗುಣಮುಖರಾಗಿ ಆಸ್ಪತ್ರೆಯಿಂದ‌ ಬಿಡುಗಡೆಗೊಂಡವರಾಗಿದ್ದಾರೆ.

ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ‌ ಪಾಸಿಟಿವ್ ಪತ್ತೆಯಾದ 55 ಜನರಲ್ಲಿ ಒಟ್ಟು 18 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 5 ಜನ ನಿಧನ ಹೊಂದಿದ್ದು, 32 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನದಲ್ಲಿ1008 ಕೊರೊನಾ ಕೇಸ್ ಪತ್ತೆ : ಬೆಚ್ಚಿ ಬಿದ್ದ ಮಹಾರಾಜ್ಯ