ಬೆಂಗಳೂರು: ಅಗ್ಗದ ದರದ ಊಟ, ಉಪಾಹಾರ ಒದಗಿಸಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಗೆ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ.
ಜಯನಗರದ ಕನಕನಪಾಳ್ಯದಲ್ಲಿರುವವ ಇಂದಿರಾ ಕ್ಯಾಂಟೀನ್ ಶಾಖೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ರಾಜಧಾನಿಯಲ್ಲಿ ಒಟ್ಟು 101 ಕ್ಯಾಂಟೀನ್ ಗೆ ಚಾಲನೆ ದೊರಕಿದೆ. ಇಲ್ಲಿ 10 ರೂ.ಗೆ ಊಟ ಮತ್ತು 5 ರೂ.ಗೆ ಉಪಾಹಾರ ದೊರೆಯಲಿದೆ.
ಅಜ್ಜಿ ಹೆಸರಿನ ಕ್ಯಾಂಟೀನ್ ಉದ್ಘಾಟಿಸಿದ ಮೇಲೆ ಕ್ಯಾಂಟೀನ್ ಒಳಗೆ ಪರಿಶೀಲನೆ ನಡೆಸಿದ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ವೇದಿಕೆಯತ್ತ ತೆರಳಿದ ರಾಹುಲ್ ಗಾಂಧಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಸಚಿವ ಕೆಜೆ ಜಾರ್ಜ್, ವಿಎಸ್ ಉಗ್ರಪ್ಪ, ಡಿಕೆ ಶಿವಕುಮಾರ್ ಮುಂತಾದ ಘಟಾನುಘಟಿ ನಾಯಕರು ಉಪಸ್ಥಿತರಿದ್ದರು.