ನವದೆಹಲಿ: ಇತ್ತೀಚೆಗಷ್ಟೇ ಅಮೇಠಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಪತ್ತೆ ಎಂದು ಪೋಸ್ಟರ್ ಕಂಡುಬಂದಿದ್ದು ಸುದ್ದಿಯಾಗಿತ್ತು. ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸರದಿ.
ಸೋನಿಯಾ ಪ್ರತಿನಿಧಿಸಿರುವ ರಾಯ್ ಬರೇಲಿ ಕ್ಷೇತ್ರದಲ್ಲಿ ‘ನಾಪತ್ತೆಯಾಗಿದ್ದಾರೆ. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು’ ಎಂದು ಪೋಸ್ಟರ್ ಕಂಡುಬಂದಿದೆ.
ರಾಹುಲ್ ರಂತೇ ಸೋನಿಯಾ ಕೂಡಾ ಕಳೆದೊಂದು ವರ್ಷದಿಂದ ತಮ್ಮ ಕ್ಷೇತ್ರಕ್ಕೆ ಭೇಟಿ ಕೊಟ್ಟಿಲ್ಲ. ಈ ಹಿನ್ನಲೆಯಲ್ಲಿ ಇಂತಹದ್ದೊಂದು ಪೋಸ್ಟರ್ ಪತ್ತೆಯಾಗಿದೆ.