Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪಿಯುಸಿ ಮಾದರಿಯಲ್ಲೇ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಪಡಿಸಿ ಮುಂದಿನ ಸೆಮಿಸ್ಟರ್ ಗೆ ಪ್ರಮೋಟ್ ಮಾಡ್ಬೇಕು ಅಂತಾ ವಿದ್ಯಾರ್ಥಿಗಳು ಆಗ್ರಹಿಸಿದ್ರು.. ಗದಗ ಜಿಲ್ಲಾಧಿಕಾರಿ ಕಚೇರಿ ಎದ್ರು ಧರಣಿ ನಡೆಸಿದ ಡಿಪ್ಲೊಮಾ ವಿದ್ಯಾರ್ಥಿಗಳು, ಪರೀಕ್ಷೆ ರದ್ದತಿಗೆ ಆಗ್ರಹಿಸಿದ್ರು.. ಮಹಾ ಮಾರಿ ಹಿನ್ನೆಲೆ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಆನ್ ಲೈನ್, ಆಫ್ ಲೈನ್ ಕ್ಲಾನ್ ಗಳು ನಡೆದಿಲ್ಲ.. ಕ್ಲಾಸ್ ಗಳನ್ನ ನಡೆಸದೇ ಪರೀಕ್ಷೆ ನಡೆಸೋದು ಸರಿಯಲ್ಲ.. ಹೀಗಾಗಿ ಕೂಡ್ಲೆ ಪರೀಕ್ಷೆ ರದ್ದು ಮಾಡ್ಬೇಕು ಅಂತಾ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ರು.. ಕೆಲ ಯೂನಿವರ್ಸಿಟಿ ಮಾದರಿಯಲ್ಲೇ ಡಿಪ್ಲೋಮಾ ವಿದ್ಯಾರ್ಥಿಗಳನ್ನ ಪ್ರಮೋಟ್ ಮಾಡಿದಲ್ಲಿ ಅನುಕೂಲವಾಗಲಿದೆ ಅಂತಾ ಮನವಿ ಸಲ್ಲಿಸಲಾಗಿದೆ..