Publish Date: Fri, 23 Jul 2021 (19:38 IST)
Updated Date: Fri, 23 Jul 2021 (19:43 IST)
ಬೆಂಗಳೂರು: ಪೂರ್ವ ಅರಬ್ಬೀಸಮುದ್ರದ ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಬಂಗಾಳ ಉಪಸಾಗರ ವಾಯುವ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪ್ರಭಾವದಿಂದ ಕರಾವಳಿ ಜಿಲ್ಲೆೆಗಳಲ್ಲಿ ಜುಲೈ 23ರಿಂದ 26ರವರೆಗೆ ವ್ಯಾಾಪಕ ಮಳೆಯಾಗುವ ಹೆಚ್ಚಿಿನ ಸಾಧ್ಯತೆಯಿದೆ.
ಉತ್ತರ ಒಳನಾಡು ಹಾಗೂ ದಕ್ಷಿಿಣ ಒಳನಾಡಿನಲ್ಲಿ ಜುಲೈ 23ರಂದು ವ್ಯಾಾಪಕ ಮಳೆಯಾಗುವ ನಿರೀಕ್ಷೆೆಯಿದೆ. ಜುಲೈ 24, 25 ಹಾಗೂ 26ರಂದು ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡುಗು ಜಿಲ್ಲೆೆಗಳ ಕೆಲವೆಡೆ ಭಾರಿ ಹಾಗೂ ಅತಿಭಾರಿ ಮಳೆಯನ್ನು ನಿರೀಕ್ಷಿಿಸಲಾಗಿದ್ದು, ಜುಲೈ 23ರಂದು ಆರೆಂಜ್ ಅಲರ್ಟ್ ಹಾಗೂ ಜುಲೈ 24, 25ರಂದು ಯೆಲ್ಲೋೋ ಅಲರ್ಟ್ ಕೊಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬೀದರ್, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆೆಗಳಲ್ಲಿ ಜುಲೈ 23ರಂದು ಯೆಲ್ಲೋೋ ಅಲರ್ಟ್ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ಪ್ರಾಾದೇಶಿಕ ನಿರ್ದೆಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾಾರೆ.
ಕರ್ನಾಟಕದ ಒಳನಾಡಿನಲ್ಲಿ ಮಾನ್ಸೂನ್ ಚುರುಕಾಗಿದೆ. ಕರಾವಳಿ, ಉತ್ತರ ಹಾಗೂ ದಕ್ಷಿಿಣ ಒಳನಾಡಿನಲ್ಲಿ ವ್ಯಾಾಪಕ ಮಳೆಯಾಗಿದೆ. ಮುಖ್ಯವಾಗಿ ಉತ್ತರ ಕನ್ನಡದ ಜಗಲ್ಬೇಟ್‌ನಲ್ಲಿ 19 ಸೆಂ.ಮೀ, ಸೋಮವಾರಪೇಟೆ, ಕೊಡಗಿನ ಭಾಗಮಂಡಲದಲ್ಲಿ ತಲಾ 11 ಸೆಂ.ಮೀ, ಬೆಳಗಾವಿಯ ನಿಪ್ಪಾಾಣಿಯಲ್ಲಿ 9 ಸೆಂ.ಮೀ, ಹಾಸನದ ಸಕಲೇಶಪುರ, ಆಗುಂಬೆಯಲ್ಲಿ ತಲಾ 10 ಸೆಂ.ಮೀ, ಬೆಳಗಾವಿಯ ನಿಪ್ಪಾಾಣಿ, ಚಿಕ್ಕಮಗಳೂರಿನ ಕೊಪ್ಪ, ಶೃಂಗೇರಿ, ಶಿವಮೊಗ್ಗದ ತೀರ್ಥಹಳ್ಳಿಿಯಲ್ಲಿ ತಲಾ 9 ಸೆಂ.ಮೀ, ಹಾಸನದ ಬಲ್ಲುಪೇಟೆ ಚಿಕ್ಕಮಗಳುರಿನ ಕೊಟ್ಟಿಿಗೇಹಾರ, ತಾಳಗುಪ್ಪದಲ್ಲಿ ತಲಾ 8 ಸೆಂ.ಮೀ, ಉತ್ತರ ಕನ್ನಡದ ಮಂಚಿಕೆರೆಯಲ್ಲಿ 6 ಸೆಂ.ಮೀ, ಯಲ್ಲಾಾಪುರ, ಶಿರಾಲಿ, ಜನ್ಮನೆ, ಕಾರ್ಕಳ, ಸಂಕೇಶ್ವರ, ಚಿಕ್ಕೋಡಿ, ಅಜ್ಜಂಪುರದಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾಾರೆ.