ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದೇ ವಿಶ್ವಾಸ ಮತ ಯಾಚನೆ ಮಾಡಬೇಕು. ಹೀಗಂತ ರಾಜ್ಯಪಾಲರು ಖಡಕ್ ಸಂದೇಶ ರವಾನಿಸಿದ್ದಾರೆ.
ಸದನಕ್ಕೆ ಈ ರೀತಿ ಸಂದೇಶವನ್ನು ವಿಶೇಷಾಧಿಕಾರಿ ಮೂಲಕ ರಾಜ್ಯಪಾಲರು ಕಳಿಸಿದ್ದಾರೆ.
ವಿಧಾನ ಸಭೆಯಲ್ಲಿ ಬೆಳಗ್ಗೆಯಿಂದಲೇ ವಿಶ್ವಾಸ ಮತದ ಕುರಿತು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚರ್ಚೆ ಶುರುಮಾಡಿದ್ದಾರೆ. ಏತನ್ಮಧ್ಯೆ ಚರ್ಚೆ ನಡೆಯುತ್ತಿರೋವಾಗಲೇ ರಾಜ್ಯಪಾಲರು ಖಡಕ್ ಸೂಚನೆ ನೀಡೋ ಮೂಲಕ ಮೈತ್ರಿ ಸರಕಾರಕ್ಕೆ ಶಾಕ್ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಕೃಷ್ಣಭೈರೇಗೌಡ, ಬಿಜೆಪಿಯವರು ಒತ್ತಾಯ ಮಾಡ್ತಿರೋದಕ್ಕೂ ಹಾಗೂ ರಾಜ್ಯಪಾಲರು ನೀಡಿರೋ ಸೂಚನೆಗೂ ಹೋಲಿಕೆ ಯಾಗ್ತಿದೆ ಎಂದು ದೂರಿದ್ರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.