ಬೆಂಗಳೂರು : ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪುನ್ನು ಪ್ರಕಟಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುತ್ತೇನೆ. ಸೂಕ್ತ ಸಮಯಕ್ಕೆ, ವಿಳಂಬ ಮಾಡದೆ ಕೆಲಸ ನಿರ್ವಹಿಸುತ್ತೇನೆ. ಕಾಲಮಿತಿ ನಿಗದಿ ಮಾಡದಿರುವುದೇ ದೊಡ್ಡ ಜವಬ್ದಾರಿ. ನಾನು ಜವಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಗೌರವಯುತವಾಗಿ ನಿಯಾಮವಳಿ ಪ್ರಕಾರ ನಡೆದುಕೊಳ್ಳುತ್ತೆನೆ ಎಂದು ಹೇಳಿದ್ದಾರೆ.
ಹಾಗೇ ಶಾಸಕರನ್ನ ಸದನಕ್ಕೆ ಕರೆಸುವುದು ನನ್ನ ಜವಬ್ದಾರಿಯಲ್ಲ, ಆ ಪಕ್ಷದ ನಾಯಕರಿಗೆ ಸಂಬಂಧಿಸಿದ ವಿಷಯವಾಗಿದೆ. ಲೆಕ್ಕಚಾರ ಪಕ್ಷಗಳಿಗೆ ಸಂಬಂಧಿಸಿದ್ದು, ನನಗಲ್ಲ, ನನ್ನ ಕರ್ತವ್ಯ ಬೇರೆ ನಾನು ಏನಿದ್ರು ಅಂಪೈರ್ ಅಷ್ಟೇ’ ಎಂದು ಅವರು ತಿಳಿಸಿದ್ದಾರೆ.