Publish Date: Wed, 17 Jul 2019 (13:14 IST)
Updated Date: Wed, 17 Jul 2019 (13:16 IST)
ಮೈತ್ರಿ ಸರಕಾರಕ್ಕೆ ಶಾಕ್ ಮೇಲೆ ಶಾಕ್ ಬೀಳುತ್ತಿದೆ. ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ನಾನು ಬರೋದೆ ಇಲ್ಲ ಅಂತ ಮತ್ತೊಬ್ಬ ಶಾಸಕರ ಹೇಳಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.
ಸರಕಾರ ಭದ್ರಪಡಿಸಿಕೊಳ್ಳೋಕೆ ಮೈತ್ರಿ ಪಕ್ಷಗಳು ಮುಂದಾಗಿದ್ರೆ, ಇತ್ತ ಶಾಸಕ ನಾಗೇಂದ್ರ ಸದನಕ್ಕೆ ಬರೋದೆ ಇಲ್ಲ ಅಂತ ತಿಳಿಸಿದ್ದಾರೆ.
ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಕೈ ನಾಯಕರು ವಿಶ್ವಾಸ ಮತ ಯಾಚನೆ ವೇಳೆ ಸದನಕ್ಕೆ ಬರುವಂತೆ ಹೇಳಿದ್ರು.
ಆದರೆ ಚಿಕಿತ್ಸೆ ಕಾರಣದಿಂದಾಗಿ ವಿಶ್ವಾಸ ಮತ ಯಾಚನೆ ವೇಳೆ ಸದನಕ್ಕೆ ಆಗಮಿಸಲು ಸಾಧ್ಯವಿಲ್ಲ ಎಂದು ನಾಗೇಂದ್ರ ಹೇಳಿರೋದ್ರಿಂದ ಮೈತ್ರಿ ಸರಕಾರಕ್ಕೆ ಮತ್ತೊಂದು ಶಾಕ್ ಬಿದ್ದಂತಾಗಿದೆ.