ತಮ್ಮ ರಾಜೀನಾಮೆಯನ್ನು ಅಂಗೀಕಾರ ಮಾಡಲು ಸ್ಪೀಕರ್ ಗೆ ನಿರ್ದೇಶನ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದ ಅತೃಪ್ತ ಶಾಸಕರಿಗೆ ಕೋರ್ಟ್ ತೀರ್ಪು ನೀಡಿದ್ದು, ಅದು ಅತೃಪ್ತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಅತೃಪ್ತ ಶಾಸಕರು ಸ್ಪೀಕರ್ ವಿರುದ್ಧ ಕೇಸ್ ದಾಖಲು ಮಾಡಿದ್ದರು. ಆದರೆ ಕೋರ್ಟ್ ಮೆಟ್ಟಿಲೇರಿದ್ದ ಶಾಸಕರಿಗೆ ಅನರ್ಹತೆ ಭೀತಿ ತಪ್ಪಿದೆ. ವಿಶ್ವಾಸ ಮತ ಸಂದರ್ಭದಲ್ಲಿ ರಾಜೀನಾಮೆ ನೀಡಿರೋ ಶಾಸಕರು ಕಡ್ಡಾಯವಾಗಿ ಭಾಗಿಯಾಗಬೇಕೆಂದಿಲ್ಲ ಅಂತ ಕೋರ್ಟ್ ಹೇಳಿದೆ.
ರಾಜೀನಾಮೆ ನೀಡಿರೋ ಶಾಸಕರಿಗೆ ವಿಪ್ ಅನ್ವಯ ಆಗೋದಿಲ್ಲ. ಇಷ್ಟೇ ಸಮಯದಲ್ಲಿ ರಾಜೀನಾಮೆ ಸ್ವೀಕಾರ ಮಾಡುವಂತೆ ಸ್ಪೀಕರ್ ಮೇಲೆ ಒತ್ತಡ ಹಾಕುವಂತಿಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ.
ಸದನದಲ್ಲಿ ಬಹುಮತ ಸಾಬೀತು ಪಡಿಸುವ ಕೆಲಸ ಮೈತ್ರಿ ಸರಕಾರ ಮಾಡಬೇಕಿದೆ. ಇನ್ನು ದೋಸ್ತಿ ಸರಕಾರದ ಅಸ್ತಿತ್ವದ ಮೇಲೆ ಇದು ಪರಿಣಾಮ ಬೀರಿದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.