Publish Date: Thu, 09 Feb 2023 (18:29 IST)
Updated Date: Thu, 09 Feb 2023 (18:31 IST)
ಕೊಪ್ಪಳ ಜಿಲ್ಲೆಯ ಅಶೋಕ ವೃತ್ತದಲ್ಲಿ ಮಾಜಿ ಸಿ ಎಂ ಕುಮಾರಸ್ವಾಮಿಯವರ ಬ್ರಾಹ್ಮಣ ಸಿಎಂ ಹೇಳಿಕೆಯನ್ನು ಖಂಡಿಸಿ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆಯನ್ನು ಮಾಡಲಾಗುತ್ತಿದೆ. ಎಚ್ ಡಿ ಕುಮಾರಸ್ವಾಮಿ ಬ್ರಾಹ್ಮಣ ಸಮಾಜದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪ ಮಾಡಲಾಗುತ್ತಿದೆ. ಬಿಜೆಪಿಯಲ್ಲಿ ಪ್ರಹ್ಲಾದ್ ಜೋಶಿಯವರನ್ನು ಸಿಎಂ ಮಾಡುವ ಹುನ್ನಾರ ನಡೆದಿದೆ ಎಂದು HDK ಆರೋಪ ಮಾಡಿದ್ದಾರೆ. ಪ್ರತಿಭಟನಾಕಾರರು HDK ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. HDK ಬ್ರಾಹ್ಮಣರ ಕ್ಷಮೆ ಕೇಳಲು ಪ್ರತಿಭಟನಾಕಾರರ ಆಗ್ರಹಿಸುತ್ತಿದ್ದಾರೆ.