Publish Date: Thu, 09 Feb 2023 (17:45 IST)
Updated Date: Thu, 09 Feb 2023 (17:57 IST)
ಕೆಲ ದಿನಗಳ ಹಿಂದೆ ಬಿಜೆಪಿಯ ಕೆಲ ನಾಯಕರು ಕುಖ್ಯಾತ ರೌಡಿಶೀಟರ್ ಗಳ ಜೊತೆ ಕಾಣಿಸಿಕೊಂಡಾಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಶಾಸಕ ಡಿಸಿ ತಮ್ಮಣ್ಣ ಆವರ ಸಮ್ಮುಖದಲ್ಲಿ ಇಬ್ಬರು ರೌಡಿಶೀಟರ್ಸ್ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಮದ್ದೂರು ಪೊಲೀಸ್ ಠಾಣೆಯ ಇಬ್ಬರು ರೌಡಿಶೀಟರ್ ಗಳಾದ ವರುಣ್ ಗೌಡ ಮತ್ತು ಪ್ರಶಾಂತ್ ಜೆಡಿಎಸ್ ಪಕ್ಷ ಸೇರಿದ್ದಾರೆ. ಶಾಸಕ ತಮ್ಮಣ್ಣ ಅವರು ರೌಡಿಶೀಟರ್ ಗಳ ಜೊತೆ ನೂರಾರು ಯುವಕರಿಗೆ ಮಾಂಸದೂಟದ ಔತಣ ಏರ್ಪಡಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಈಗ ಎಲ್ಲಾ ಪಕ್ಷಗಳಲ್ಲೂ ರೌಡಿ ಹಿನ್ನೆಲೆಯ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದಾರೆ.