Publish Date: Thu, 09 Feb 2023 (18:08 IST)
Updated Date: Thu, 09 Feb 2023 (18:10 IST)
ಮುಖ್ಯಮಂತ್ರಿಯಾಗಿದ್ದ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರ ಇಲ್ಲ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಜನರು ಓಡಿಸಿದ್ದಾರೆ. ಇತ್ತ ಕೋಲಾರ ಕ್ಷೇತ್ರದ ಜನರು ಸಿದ್ದರಾಮಯ್ಯಗೆ ಜಾಡಿಸಿದ್ದಾರೆ. ವರುಣಾ ಕ್ಷೇತ್ರದ ಜನ ಬರಬೇಡಿ ಅಂತ ಕಲ್ಲು ಹಿಡಿದು ನಿಂತಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಕಾರವಾರದಲ್ಲಿ ನಡೆದ ಮ ಅಭಿಯಾನ, ಮತಗಟ್ಟೆ ಪೇಜ್ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾತನಾಡಿದ ಅವರು ವಿರೋಧಿಗಳಾಗಿದ್ದ ಸಿದ್ದರಾಮಯ್ಯ, ಮಾಜಿ ಮುಖ್ಯ ಹೆಚ್ಡಿ ಕುಮಾರಸ್ವಾಮಿ ಸೇರಿ ಮೈತ್ರಿ ಸರ್ಕಾರ ರಚಿಸಿದರು. ಆದರೆ ಸಮ್ಮಿಶ್ರ ಸರ್ಕಾರ ರಚಿಸಿದ್ರೂ ಉಳಿಲಿಲ್ಲ ಎಂದು ಕಿಡಿಕಾರಿದರು. ರಾಜ್ಯದಲ್ಲಿ ನರಹಂತಕ ಮುಖ್ಯಮಂತ್ರಿಯಾದದ್ದು ಒಬ್ಬರೇ ಅದು ಸಿದ್ದರಾಮಯ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆಯಾದರೂ ಅವರಿಗೆ ಕಣ್ಣೀರು ಬರಲಿಲ್ಲ. ಪಿಎಫ್‌ಐಗೆ ಬೆಂಬಲ ನೀಡಿ ಹಿಂದೂಗಳ ಕೊಲೆಗೆ ಕಾರಣವಾದರು. ರಾಜ್ಯದಲ್ಲಿ ಕಾಂಗ್ರೆಸ್‌ನಿಂದಲೇ ಭಯೋತ್ಪಾದನೆ ಪ್ರಾರಂಭವಾಗಿದೆ. ಕಾಂಗ್ರೆಸ್ ಉಗ್ರ ಪಕ್ಷ ಎಂದು ಆರೋಪ ಮಾಡಿದರು.