ಪ್ರೀತಿ ಮಾಯೆ ಹುಷಾರು ಅನ್ನೋದು ಇದಕ್ಕೆ ಅನ್ಸತ್ತೆ. ಮಂಡ್ಯದ ಈತನಿಗೆ ಸಪ್ತಪದಿ ತುಳಿದು ಹೆಜ್ಜೆಯಿಟ್ಟು ಬಂದ ಹೆಂಡತಿಯಿದ್ದಳು. ಆದರೂ ಪರಸ್ತ್ರೀ ಮೇಲೆ ಮೋಹ. ಈ ಬಲೆಗೆ ಬಿದ್ದವನೇ ಮಾಡಿದ್ದು ಮಾತ್ರ ಒಂದು ಎರಡಲ್ಲ ಮೂರು ಕೊಲೆ.
ಮಿಸ್ಸಿಂಗ್ ಕೇಸ್ನಿಂದ ತಗ್ಲಾಕೊಂಡ್ರು!
ಮಂಡ್ಯದಲ್ಲಿ 2 ತಿಂಗಳ ಹಿಂದೆ ನಾಲೆಯಲ್ಲಿ ಎರಡು ರುಂಡವಿಲ್ಲದ ಮೃತದೇಹ ತೇಲಿಬಂದಿತ್ತು. ಈ ಪ್ರಕರಣದ ಬೆನ್ನುಬಿದ್ದ ಶ್ರೀರಂಗಪಟ್ಟಣ ಪೊಲೀಸರಿಗೆ ಸಿಕ್ಕಿದ್ದು ಚಾಮರಾಜನಗರದಲ್ಲಿನ ಒಂದು ಮಿಸ್ಸಿಂಗ್ ಕೇಸ್. ಆ ಮಿಸ್ಸಿಂಗ್ ಕೇಸ್ನ್ನು ಬೆನ್ನತ್ತಿದಾಗ ರುಂಡವಿಲ್ಲದ ಮೃತದೇಹ ಪ್ರಕರಣ ಹೊರಬಿದ್ದಿದೆ.