Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಸ್ತೆಯಲ್ಲಿ ನಡೆಯುತ್ತಾ ಮುಂದೆ ಸಾಗುತ್ತಿರಬೇಕಾದ್ರೆ ಒಂದೊಮ್ಮೆ ಫುಟ್ ಪಾತ್ ಅಥವಾ ರಸ್ತೆ ಕುಸಿಯಿತು ಎಂದರೆ ಒಂದುಕ್ಷಣ ನಿಮ್ಮ ಹೃದಯ ಧಸಕ್ಕನ್ನಬಹುದು ಅಲ್ವಾ... ಇದೀಗ ಇಂಥದ್ದೇ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬರು ಸ್ವಲ್ಪದರಲ್ಲೇ ಅಪಘಾತದಿಂದ ಪಾರಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಿಸಿ ಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬ ಅಂಗಡಿಯೊಂದರ ಕಡೆಗೆ ಹೋಗುತ್ತಿರುವುದು ಕಂಡು ಬಂದಿದೆ. ಆದರೆ, ಅವರು ಪ್ರವೇಶಿಸಲು ಮುಂದಾದ ತಕ್ಷಣ, ಅವರು ಸೆಕೆಂಡ್‌ಗಳ ಹಿಂದೆ ನಿಂತಿದ್ದ ಫುಟ್‌ಪಾತ್ ಬಿರುಕು ಬಿಟ್ಟು ಕೆಳಗೆ ಬಿದ್ದಿದೆ. ಸ್ವಲ್ಪದರಲ್ಲೇ ವ್ಯಕ್ತಿಯು ಚರಂಡಿಗೆ ಬೀಳುವುದರಿಂದ ಪಾರಾಗಿದ್ದಾರೆ.