Publish Date: Thu, 20 Apr 2023 (18:50 IST)
Updated Date: Thu, 20 Apr 2023 (18:36 IST)
ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಸ್ಟಾರ್ ಪ್ರಚಾರಕರಿಂದ ಪ್ರಚಾರ ನಡೆಸಲಾಗ್ತಿದೆ.. ರಾಜ್ಯ ರಣಕಣಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಡಲಿದ್ದು, ಪ್ರಚಾರ ನಡೆಸಲಿದ್ದಾರೆ.. ಆದರೆ ಈ ಬಾರಿ ಆನ್ಲೈನ್ ಮೂಲಕ ಪ್ರಚಾರ ನಡೆಸಲಿದ್ದಾರೆ.. ಏಪ್ರಿಲ್ 27 ರಂದು ಮೋದಿ ಆನ್ಲೈನ್ ಮೂಲಕ ಭಾಷಣ ನಡೆಸಲಿದ್ದಾರೆ.. 50 ಲಕ್ಷ ಜನರನ್ನು ಸೇರಿಸಲು ರಾಜ್ಯ ಬಿಜೆಪಿ ತೀರ್ಮಾನ ಮಾಡಿಕೊಂಡಿದ್ದು, ಮಹಾ ಶಕ್ತಿಕೇಂದ್ರದಲ್ಲಿ LED ಸ್ಕ್ರೀನ್ ಅಳವಡಿಕೆಗೆ ನಿರ್ಧರಿಸಲಾಗಿದೆ. ರಾಜ್ಯದ ಎಲ್ಲಾ 58 ಸಾವಿರ ಬೂತ್ಗಳನ್ನು ಒಳಗೊಂಡ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಭಾಷಣ ವೀಕ್ಷಿಸಲಿದ್ದಾರೆ. ಮರುದಿನ ಅಂದರೆ ಏಪ್ರಿಲ್ 28 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಹಳೆ ಮೈಸೂರು ಭಾಗದಲ್ಲಿ ಮೊದಲ ರ್ಯಾಲಿ ನಡೆಸಲಿದ್ದಾರೆ.. ಸರಿ ಸುಮಾರು 20 ಕಡೆ ರ್ಯಾಲಿ ನಡೆಸಲಿದ್ದಾರೆ.. 5 ರೋಡ್ ಶೋ ನಡೆಸಲು ನಿರ್ಧಾರ ಮಾಡಲಾಗಿದ್ದು, ಕಲಬುರಗಿ, ಬೆಂಗಳೂರು, ಹುಬ್ಬಳ್ಳಿ ಸೇರಿ ಒಟ್ಟು ಐದು ಕಡೆ ರೋಡ್ ಶೋ ನಡೆಸಲಿದ್ದಾರೆ. ಅಂತಿಮ ಹಂತದಲ್ಲಿ ಅಗತ್ಯ ಎನಿಸಿದರೆ ಒಂದೆರಡು ಕಾರ್ಯಕ್ರಮ ಹೆಚ್ಚು ಆಯೋಜಿಸಲು ತೀರ್ಮಾನ ಮಾಡಲಾಗಿದೆ.