Publish Date: Thu, 20 Apr 2023 (18:16 IST)
Updated Date: Thu, 20 Apr 2023 (18:30 IST)
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಅಬ್ಬರ ಜೋರಾಗಿದೆ.. ಬಿಜೆಪಿ ವರಿಷ್ಠರು ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದು, ಅಬ್ಬರದ ಪ್ರಚಾರಕ್ಕೆ ಅಣಿಯಾಗ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ರಾಜ್ಯಕ್ಕೆ ಬರುತ್ತಿದ್ದು, ರಣ ಕಹಳೆ ಮೊಳಗಿಸುತ್ತಿದ್ದಾರೆ.. ನಾಳೆ ಮಧ್ಯಾಹ್ನ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ನಾಳೆ ಸಂಜೆ ಅಥವಾ ರಾತ್ರಿ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ ನಡೆಯುವ ಸಾಧ್ಯತೆಯಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಯಲಿದ್ದು, ಚುನಾವಣಾ ಚಾಣಕ್ಯ ರಣತಂತ್ರ ರೂಪಿಸಿದ್ದಾರೆ.