Publish Date: Thu, 20 Apr 2023 (17:35 IST)
Updated Date: Thu, 20 Apr 2023 (18:11 IST)
ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ವೀರಶೈವ ಲಿಂಗಾಯತರೇ ಸಿಎಂ ಎಂದು ಘೋಷಿಸಲಿ, ಶೆಟ್ಟರ್ ಅವರನ್ನೇ ಸಿಎಂ ಮಾಡ್ಲಿ ಎಂದು ಸಚಿವ V.ಸೋಮಣ್ಣ ಕಾಂಗ್ರೆಸ್ಗೆ ಸವಾಲ್ ಹಾಕಿದ್ದಾರೆ. ಚಾಮರಾಜನಗರದ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಅವರು, ಬಿಜೆಪಿ ಲಿಂಗಾಯತ ವಿರೋಧಿಗಳು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ವೀರೇಂದ್ರ ಪಾಟೀಲರನ್ನು ತೆಗೆದಿದ್ದು ಯಾರು.? ರಾಜಶೇಖರ ಮೂರ್ತಿ ಅವರನ್ನು ಓಡಿಸಿದ್ದು ಯಾರು..? ಲಿಂಗಾಯತರು ದಡ್ಡರಲ್ಲ, ಅವರು ಮತ ಬ್ಯಾಂಕ್ ಆಗಿ ಇಟ್ಟುಕೊಂಡು ಕಾಂಗ್ರೆಸ್ ಏನು ಮಾಡಿಲ್ಲ, ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದ್ರು.. ರಾಜ್ಯಾದ್ಯಂತ ಬಿಜೆಪಿ ಬೆಂಬಲಿಸುತ್ತಾರೆ. ಲಿಂಗಾಯತರನ್ನು ಬ್ಲ್ಯಾಕ್ಮೇಲ್ ಮಾಡಿ ಏನೋ ಮಾಡುತ್ತೇವೆ ಎಂದು ಕಾಂಗ್ರೆಸ್ನವರು ಆಸೆ ಇಟ್ಟುಕೊಂಡಿದ್ದರೆ ಅವರಿಗೆ ನಿರಾಸೆಯಾಗಲಿದೆ. ಅವರಲ್ಲಿ ಅಷ್ಟು ದೊಡ್ಡ ವಿಷನ್ ಇದ್ದರೆ ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಹೇಳಲಿ, ಯೂಸ್ ಅಂಡ್ ಥ್ರೋ ಮಾತುಗಳು ಬೇಡ ಎಂದು ಕಾಂಗ್ರೆಸ್ ವಿರುದ್ಧ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.