Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ತಮಿಳುನಾಡಿನಲ್ಲಿ ತೇರು ಎಳೆಯುವಾಗ ವಿದ್ಯುತ್ ತಂತಿ ಸ್ಪರ್ಶವಾಗಿ ಇಬ್ಬರು ಮಕ್ಕಳು ಸೇರಿ 10 ಮಂದಿ ಸಾವನ್ನಪ್ಪಿರುವ ಘಟನೆ ತಂಜಾವೂರು ಜಿಲ್ಲೆಯ ಕಲಿಮೇಡು ಗ್ರಾಮದಲ್ಲಿ ಸಂಭವಿಸಿದೆ..ಗ್ರಾಮದ ಅಪ್ಪರ್ಸ್ವಾಮಿ ದೇವಸ್ಥಾನದ ತೇರು ಹೈ ಟೆನ್ಶನ್ ವೈರ್ಗೆ ತಗುಲಿದ್ದರಿಂದ ದುರಂತ ಸಂಭವಿಸಿದೆ.. ದುರಂತದಲ್ಲಿ 15 ಮಂದಿಗೂ ಹೆಚ್ಚು ಗಾಯಗಳಾಗಿವೆ..ಘಟನೆಯಲ್ಲಿ ಗಾಯಗೊಂಡ ಸುಮಾರು 50 ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ದುರ್ಘಟನೆ ನಡೆದಾಗ ಸ್ಥಳದಲ್ಲೇ ನಾಲ್ವರು ಭಕ್ತರು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಏಳು ಮಂದಿ ಮೃ ತಪಟ್ಟಿದ್ದಾರೆ.ಮೃತರ ಕುಟುಂಬಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಲಾ₹ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಾಗಳಿಗೆ ಅತ್ಯುತ್ತಮ ಚಿಕಿತ್ಸೆ ಸಿಗುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.