Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಯಚೂರು ಜಿಲ್ಲೆಗೆ ನಟ ಕಿಚ್ಚ ಸುದೀಪ್ ಆಗಮಿಸಿ ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿದ್ದಾರೆ.. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಟ, ನನ್ನ ಮೂರ್ತಿ ಪ್ರತಿಷ್ಠಾಪನೆಗೆ ಹೊರಟಿದ್ದ ಅಭಿಮಾನಿಗಳ ಪ್ರೀತಿಗೆ ನಾನು ಎಂದಿಗೂ ಶರಣು..ತುಂಬಾ ಜನರು ಸಾಧನೆ ಮಾಡಿದವರು ಇದ್ದಾರೆ. ಅವರಿಗೆ ಗೌರವ ಸಲ್ಲಬೇಕು.. ನಾನು ಇನ್ನೂ ಅಷ್ಟು ದೊಡ್ಡವನಲ್ಲ, ಸಾಧನೆ ಮಾಡಬೇಕಾದದ್ದು ನನಗೆ ತುಂಬಾ ಇದೆ..ಮುಂದಿನ ದಿನಗಳಲ್ಲಿ ಅಂತಹ ದಿನ ಬಂದಾಗ ನನ್ನ ಮೂರ್ತಿ ಇಡಲಿ ಆಗ ನಾನೇ ಬರ್ತೀನಿ.. ನನ್ನ ಮೂರ್ತಿ ನಿರ್ಮಾಣಕ್ಕೆ ಮೊದಲೇ ತಿಳಿದಿದ್ದರೆ ನಾನು ಬೇಡ ಎನ್ನುತ್ತಿದ್ದೆ, ಆದ್ರೆ ನನ್ನ ಮೂರ್ತಿ ನಿರ್ಮಾಣವಾದ ಮೇಲೆ ನನಗೆ ಗೊತ್ತಾಗಿದೆ ಎಂದು ನಟ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ರು.