Publish Date: Fri, 11 Aug 2023 (21:00 IST)
Updated Date: Fri, 11 Aug 2023 (20:55 IST)
ಕಂಟ್ರಾಕ್ಟರ್ ಅಸೋಸಿಯೇಷನ್ ಸುದ್ದಿಗೋಷ್ಠಿ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಅವರು, ಅವರೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡಬೇಕು. ಕಂಟ್ರಾಕ್ಟರುಗಳು ಯಾರಿಗೆ ಎಷ್ಟು ಕೊಟ್ಟಿದಾರೆ ಎಂದು ನಾನು ಚರ್ಚೆ ಮಾಡಲು ಹೋಗಲ್ಲ. 10 ರಿಂದ 15 ಪರ್ಸೆಂಟ್ ಕಮಿಷನ್ ಕೇಳಿದ್ರು ಅಂತಾರೆ. ಯಾರು ಕೇಳಿದ್ರು? ನಾನು ಏನಾದರೂ ಕೇಳಿದ್ರೆ ಇವತ್ತೇ ರಾಜಕೀಯ ನಿವೃತ್ತಿಯಾಗುವೆ, ಬೊಮ್ಮಾಯಿ ಆಗ್ತಾರಾ? ಅಥವಾ ಅಶೋಕ್ ಆಗ್ತಾನಾ? ಅಶೋಕ್ ಮಾತನಾಡಿದ್ದನ್ನ ನೋಡಿದ್ದೇನೆ. ಅವರಿಗೆಲ್ಲಾ ಎಲ್ಲಿ ಉತ್ತರಿಸಬೇಕೋ ಅಲ್ಲಿ ಉತ್ತರಿಸುತ್ತೀನಿ ಎಂದು ಆರ್.ಅಶೋಕ್ ವಿರುದ್ಧ ಡಿಕೆಶಿ ಏಕವಚನದಲ್ಲೇ ಹರಿಹಾಯ್ದರು.