ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಚಲುವರಾಯಸ್ವಾಮಿ ಅವರನ್ನು ವಜಾ ಮಾಡಿ ಲೋಕಾಯುಕ್ತ ತನಿಖೆಗೆ ಕೊಡಬೇಕು ಎಂದು ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರ ಮೇಲೆ ಆರೋಪ ಬಂದಿದ್ದು, ಅಧಿಕಾರಿಗಳು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಸಾರಿಗೆ ನೌಕರನೊಬ್ಬ ಚಲುವರಾಯಸ್ವಾಮಿ ಅವರಿಂದ ಆತ್ಮಹತ್ಯೆಗೆ ಯತ್ನಿಸಿದ. ಎಲ್ಲೆಡೆ ಪೇ ಸಿಎಂ, ಪೇ ಡಿಸಿಎಂ ಆಗಿದೆ. ರಾಜ್ಯಪಾಲರಿಂದ ಕ್ರಮಕ್ಕೆ ಸೂಚಿಸಿ ಪತ್ರ ಬಂದಿದೆ, ಆದರೆ ಸಿಎಂ ನೇರವಾಗಿ ಫೇಕ್ ಲೆಟರ್ ಎನ್ನುತ್ತಾರೆ. ತಕ್ಷಣ ಸಚಿವರನ್ನ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನ ವಜಾ ಮಾಡಬೇಕು ಮತ್ತು ಲೋಕಾಯುಕ್ತ ತನಿಖೆಗೆ ಕೊಡಬೇಕು. ಕೆಂಪೇಗೌಡರು ನಾಡು ಕಟ್ಟಿದ್ರು, ಇವರು ನಾಡು ಒಡೆಯುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ ಇನ್ಮೇಲೆ ಕೆಂಪೇಗೌಡರ ಹೆಸರನ್ನ ಹೇಳಬೇಡಿ ಎಂದು ಡಿಸಿಎಂ ವಿರುದ್ಧ ಹರಿಹಾಯ್ದರು.