Publish Date: Tue, 06 Jul 2021 (09:41 IST)
Updated Date: Tue, 06 Jul 2021 (09:45 IST)
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಫೈನ್ ಕಟ್ಟಲು ದುಡ್ಡಿಲ್ಲ ಎಂದು ಪರದಾಡುವ ಪರಿಸ್ಥಿತಿ ಎದುರಿಸಿದ್ದೀರಾ? ಹಾಗಿದ್ದರೆ ಇನ್ನು ಇಂತಹ ಸಾಬೂಬು ಹೇಳುವಂತಿಲ್ಲ. ಇದಕ್ಕೆ ಬೆಂಗಳೂರು ಪೊಲೀಸರು ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ.
ಇನ್ನು ಮುಂದೆ ಪೇಟಿಎಂ ಬಳಸಿ ದಂಡ ಕಟ್ಟಲು ವ್ಯವಸ್ಥೆ ಮಾಡಲಾಗಿದೆ. ಟೆಲಿಬ್ರಹ್ಮ ಸಾಫ್ಟ್ ವೇರ್ ಬಳಸಿ ನಗರ ಸಂಚಾರಿ ಪೊಲೀಸರು ಫೈನ್ ಸಂಗ್ರಹಿಸಲಿದ್ದಾರೆ.
ಟ್ರಾಫಿಕ್ ಫೈನ್ ಕಟ್ಟಲು ಶುಲ್ಕ ರಹಿತ ಸೇವೆ ಒದಗಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದರೆ ಪೇಟಿಎಂನಲ್ಲಿ ಫೈನ್ ಕಟ್ಟಿ ಆಪ್ ಮೂಲಕವೇ ರಸೀತಿ ಪಡೆದುಕೊಳ್ಳಬಹುದು.