Publish Date: Mon, 05 Jul 2021 (11:17 IST)
Updated Date: Mon, 05 Jul 2021 (11:18 IST)
ಮೈಸೂರು: ಅನ್ ಲಾಕ್ ಆದ ಬೆನ್ನಲ್ಲೇ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಮತ್ತೆ ನಾಯಕತ್ವ ಬದಲಾವಣೆ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ.
ಪಕ್ಷ ಉಳೀಬೇಕೆಂದರೆ ನಾಯಕತ್ವ ಬದಲಾಗಲೇಬೇಕು. ಆಗಸ್ಟ್ 15 ಕ್ಕೂ ಮೊದಲೇ ನಾಯಕತ್ವ ಬದಲಾಗಲಿದೆ. ಒಂದು ದಿನ ಮುಂದೆ ಹೋದರೂ ಇವರು 100 ಕೋಟಿ ಲೂಟಿ ಹೊಡೀತಾರೆ. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಈ ನಾಯಕತ್ವ ಹೋಗಬೇಕು ಎಂದು ಸಿಎಂ ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ನೇರವಾಗಿ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ನಡೆಸುತ್ತಿರುವ ಮಠಾಧೀಶರ ಬಗ್ಗೆ ಯತ್ನಾಳ್ ಕಿಡಿ ಕಾರಿದ್ದಾರೆ. ಮಠಾಧಿಪತಿಗಳು ದಕ್ಷಿಣೆಗೆ ನೀಡಿದ್ದಾರೆಂದು ರಾಜಕೀಯ ಮಾಡಲು ಬರಬಾರದು. ಮಠಗಳು ಲವ್ ಜಿಹಾದ್ ವಿರುದ್ಧ ಹೋರಾಡಲಿ, ಧರ್ಮ ಕಾರ್ಯ ಮಾಡಲಿ. ಇದು ನಿಮ್ಮ ಕೆಲಸ ಅಲ್ಲ ಎಂದಿದ್ದಾರೆ.