Publish Date: Mon, 05 Jul 2021 (09:54 IST)
Updated Date: Mon, 05 Jul 2021 (09:56 IST)
ಮೈಸೂರು: ಇಂದಿನಿಂದ ರಾಜ್ಯದಲ್ಲಿ ಎಲ್ಲವೂ ಮುಕ್ತ.. ಮುಕ್ತ.. ಅನ್ ಲಾಕ್ 3.0 ರಲ್ಲಿ ರಾಜ್ಯ ಸರ್ಕಾರ ದೇವಾಲಯಗಳನ್ನು ಸಂಪೂರ್ಣವಾಗಿ ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ಅದರಂತೆ ನಾಡದೇವತೆ ಚಾಮುಂಡೇಶ್ವರಿ ದೇವಾಲಯ ಇಂದಿನಿಂದ ಭಕ್ತರಿಗೆ ಸಂಪೂರ್ಣವಾಗಿ ತೆರೆದುಕೊಂಡಿದೆ. ಈ ಹಿನ್ನಲೆಯಲ್ಲಿ ಮೊದಲ ದಿನವೇ ಭಕ್ತರ ಸಾಲು ಕಂಡುಬಂದಿದೆ.
ಚಾಮುಂಡೇಶ್ವರಿ ದೇವಾಲಯ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳೆಲ್ಲವೂ ಭಕ್ತರಿಗಾಗಿ ತೆರೆದಿದ್ದು, ಬೆಳಗ್ಗಿನಿಂದಲೇ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ದೇವಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ದೇವರ ಸೇವೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.