Publish Date: Fri, 22 Mar 2019 (15:20 IST)
Updated Date: Fri, 22 Mar 2019 (15:22 IST)
ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ಮತದಾರರ ಆಕ್ರೋಶಕ್ಕೆ ಗುರಿಯಾದ ಘಟನೆ ನಡೆದಿದೆ.
ಮಂಡ್ಯ ಜನರ ಆಕ್ರೋಶಕ್ಕೆ ನಿಖಿಲ್ ತುತ್ತಾಗಿದ್ದಾರೆ. ತಂದೆ ಹೊಗಳಿಕೆಗೆ ಮುಂದಾದ ನಿಖಿಲ್ ರ ಭಾಷಣಕ್ಕೆ ಜನರು ವಿರೋಧ ವ್ಯಕ್ತಪಡಿಸಿದರು. ಕುಮಾರಣ್ಣ ಎಂಟೂವರೆ ಸಾವಿರ ಕೊಟ್ಟಿದ್ದಾರೆ ಎಂದು ಭಾಷಣ ಆರಂಭಿಸಿದ ನಿಖಿಲ್ ಗೆ
ಭಾಷಣ ಮಾಡಲು ಮತದಾರರು ಅವಕಾಶ ನೀಡಲಿಲ್ಲ.
ಮತದಾರರ ಆಕ್ರೋಶದಿಂದ ಮುಜುಗರಕ್ಕೊಳಗಾದ ನಿಖಿಲ್ ಕುಮಾರಸ್ವಾಮಿ, ಭಾಷಣ ನಿಲ್ಲಿಸಿ ಪ್ರಚಾರ ವಾಹನದಲ್ಲೇ ಮುಂದೆ ಸಾಗಿದರು.
ಮಂಡ್ಯ ತಾಲೂಕಿನ ಹುಲಿವಾನ ಗ್ರಾಮದ ಬಳಿ ಈ ಘಟನೆ ನಡೆದಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ ನಿಖಿಲ್. ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಮತದಾರರ ವಿರೋಧಕ್ಕೆ ತುತ್ತಾದ ನಿಖಿಲ್, ಅದರ ನಡುವೆಯೇ ಪ್ರಚಾರ ತೀವ್ರಗೊಳಿಸಿದ್ದಾರೆ.