ನನ್ನ ಅಸ್ತಿತ್ವಕ್ಕಾಗಿಯೂ ಅಲ್ಲ, ನಾನು ನನ್ನ ಅಸ್ತಿತ್ವವನ್ನ ಸಿನಿಮಾರಂಗದ ಮೂಲಕ ಕಾಪಾಡಿಕೊಂಡಿದ್ದೇನೆ.
ಆದರೆ ಮಂಡ್ಯದ ಜನರು, ಕಾಂಗ್ರೆಸ್ಸಿಗರು ರಾಜಕೀಯಕ್ಕೆ ಬರಲೇಬೇಕೆಂದು ಒತ್ತಡ ಹೇರಿದರು. ಹೀಗಾಗಿ ನಾನು ರಾಜಕೀಯಕ್ಕೆ ಬರುವ ಮೊದಲೇ ಜೆಡಿಎಸ್ ನಾಯಕರು ಅವರು ಕಾಂಗ್ರೆಸ್‌ನಲ್ಲಿದ್ದವರು ಎಂದು ಹೇಳಿದ್ರು. ಇನ್ನು ಕಾಂಗ್ರೆಸ್ ಕಾರ್ಯಕರ್ತರ ಅಸ್ತಿತ್ವಕ್ಕಾಗಿಯಾದರೂ ನನಗೆ ಟಿಕೆಟ್ ಕೊಡಿಸಿ ಎಂದಾಗ ಕಾಂಗ್ರೆಸ್ ನಾಯಕರು ನಾವು ನಿಸ್ಸಾಯಕರು ಎಂದು ಹೇಳಿದ್ರು. ಹೀಗಂತ ಸುಮಲತಾ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಆದರೆ ಮಂಡ್ಯದಲ್ಲಿ ಮೈತ್ರಿ ಧರ್ಮ ಎಲ್ಲಿ ಪಾಲಿಸುತ್ತಿದ್ದಾರೆ? ನಮ್ಮ ಕಾರ್ಯಕರ್ತರಿಗೆ ಧಮ್ಕಿ, ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. ನಮ್ಮ ಮುಂದೆ ಹಿಮಾಲಯ ಪರ್ವತ ಏರುವಂತ ದೊಡ್ಡ ಸವಾಲಿದೆ. ನಿವುಗಳು ನನ್ನ ಜೊತೆ ಇದ್ದರೆ ನಾನು ಸವಾಲನ್ನ ಸ್ವೀಕರಿಸುತ್ತೇನೆ
ಪರೋಕ್ಷವಾಗಿ ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದರು. ಇನ್ನು ಮುಂದಿನ ನನ್ನ ಸವಾಲುಗಳಿಗೆ ನೀವೆ ಉತ್ತರಿಸಬೇಕು.
ಚಿತ್ರರಂಗದವರನ್ನ ಯಾರು ಬಳಸಿಕೊಂಡಿಲ್ಲವೇ? ಯಾರು ಯಾವ ಕಲಾವಿದರನ್ನ ಪ್ರಚಾರ ಬಳಸಿಕೊಂಡಿದ್ದಾರೆ ಎಂಬುದು ನಿಮಗೆಲ್ಲಾ ತಿಳಿದಿದೆ. ಅಂಬರೀಶ್ ಮೇಲಿನ ಪ್ರೀತಿಯಿಂದ ಚಿತ್ರರಂಗ ನನ್ನ ಪರವಾಗಿದೆ ಎಂದರು.
ತಾಯಿಗಾಗಿ ಮಕ್ಕಳು ಪ್ರಚಾರಕ್ಕೆ ಬರುವುದು ತಪ್ಪಾ? ಯಶ್, ದರ್ಶನ್ ನಮ್ಮ ಮನೆ ಮಕ್ಕಳು. ಅಂಬರೀಶ್, ಯಶ್, ದರ್ಶನ್‌ಗೆ ಇಡೀ ಇಂಡಿಯಾದಲ್ಲಿ ಅಭಿಮಾನಿಗಳಿದ್ದಾರೆ. ನಿಮ್ಮ ಮಾತಿನಿಂದ ಅವರ ಮೇಲಿನ ಅಭಿಮಾನ ಕಡಿಮೆಯಾಗಲ್ಲ. ಆದರೆ ನೀವು ಸ್ಪರ್ಧಿಸುವ ಕ್ಷೇತ್ರಗಳಲ್ಲೂ ಅಭಿಮಾನಿಗಳಿದ್ದಾರೆ. ಅವರ ಅಭಿಮಾನಿಗಳು ತಕ್ಕಪಾಠ ಕಲಿಸುತ್ತಾರೆ ನಿಮಗೆಲ್ಲಾ ಎಂದು ತಿರುಗೇಟು ನೀಡಿದ್ರು.
ನಾನು ಗೆದ್ದರೆ ಮಲೆಷಿಯಾದಲ್ಲಿರ್ತಾರೆ ಮಂಡ್ಯಕ್ಕೆ ಬರಲ್ಲಾ ಅಂತ ಟೀಕೆ ಮಾಡ್ತಾರೆ. ನಾನು ಎಲ್ಲಾ ಕಂಟ್ರಿಗಳನ್ನ ನೋಡಿದ್ದೇನೆ, ಅಂಬರೀಶ್ ನಿಜವಾಗಿ ಎಲ್ಲಾ ದೇಶ ಸುತ್ತಿಸಿದ್ದಾರೆ ಅಂತಾ ಟೀಕಾಕಾರರಿಗೆ ತಿರುಗೇಟು ನೀಡಿದ್ರು.