Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯಕ್ಕೆ ಕಂಟಕವಾಗುತ್ತಿರುವ ಮುಂಬೈ : ಈ ಜಿಲ್ಲೆಯಲ್ಲಿ 9 ಕೋವಿಡ್ ಕೇಸ್

ರಾಜ್ಯಕ್ಕೆ ಕಂಟಕವಾಗುತ್ತಿರುವ ಮುಂಬೈ : ಈ ಜಿಲ್ಲೆಯಲ್ಲಿ 9 ಕೋವಿಡ್ ಕೇಸ್
ತುಮಕೂರು , ಶುಕ್ರವಾರ, 22 ಮೇ 2020 (18:58 IST)
ಮುಂಬೈನಿಂದ  ರಾಜ್ಯಕ್ಕೆ ಬಂದವರಲ್ಲಿ ಕೊರೊನಾ ವೈರಸ್ ಕೇಸ್ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗತೊಡಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹಿಳೆ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ 9 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್  ತಿಳಿಸಿದ್ದಾರೆ.

ಮುಂಬೈನಿಂದ ತುರುವೇಕೆರೆಗೆ ಆಗಮಿಸಿದ್ದ ಐವರನ್ನು ಕ್ವಾರಂಟೈನ್ ಮಾಡಲಾಗಿತ್ತು. ತುಮಕೂರು ನಗರದ ಗರ್ಭಿಣಿ, ತುಮಕೂರು ತಾಲ್ಲೂಕಿನ ಹೆಬ್ಬೂರಿನ ವೃದ್ಧನಿಗೆ ಸೋಂಕು ತಗುಲಿದ್ದು, ಡಾಬಸ್ ಪೇಟೆಯಿಂದ ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದ ಮಹಿಳೆಗೂ ಸೋಂಕು ದೃಢಪಟ್ಟಿದೆ.

ಸೋಂಕಿತರಲ್ಲಿ ಗರ್ಭಿಣಿಯನ್ನು ಬೆಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಉಳಿದಂತೆ ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಬ್ಬೂರು ಹಾಗೂ ಸದಾಶಿವ ನಗರವನ್ನು ಕಂಟೋನ್ಮೆಂಟ್ ಪ್ರದೇಶವಾಗಿ ಮಾರ್ಪಡಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ನಂಜಿಗೆ ತತ್ತರಿಸಿದ ಜಿಲ್ಲೆ : ಒಂದೇ ದಿನ 45 ಕೊರೊನಾ ಕೇಸ್