Publish Date: Thu, 21 May 2020 (18:31 IST)
Updated Date: Thu, 21 May 2020 (18:32 IST)
ಮುಂಬೈ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡಿ ಹಿಂತಿರುಗಿದ 11 ಮಂದಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.
ಮುಂಬೈನಿಂದ ಗಣಿನಾಡು ಬಳ್ಳಾರಿಗೆ ಕೊರೊನಾ ವಕ್ಕರಿಸಿದೆ.
ಮೂರು ಕುಟುಂಬಗಳ ಸೋಂಕಿತರಲ್ಲಿ ಏಳು ಮಹಿಳೆಯರು, ಮೂವರು ಪುರುಷರು ಮತ್ತು ಮಂಗಳ ಮುಖಿಗೆ ಕೊರೊನಾ ದೃಢಪಟ್ಟಿದೆ.
ಮಹಿಳೆಯರ ಪೈಕಿ ಒಬ್ಬರು ಗರ್ಭಿಣಿ ಮತ್ತು ಒಬ್ಬರು ಬಾಣಂತಿ ಇದ್ದಾರೆ. ಒಂಭತ್ತು ತಿಂಗಳ ಮಗುವನ್ನು ಕ್ವಾರಂಟೈನ್ ನಲ್ಲಿರುವ ಅಜ್ಜ ಅಜ್ಜಿ ಪೋಷಣೆ ಮಾಡುತ್ತಾರೆ. ಮಗುವಿನ ಗಂಟಲ ದ್ರವದ ಪರೀಕ್ಷೆ ನಡೆಸಲಾಗುತ್ತಿದೆ.
ಬಳ್ಳಾರಿ ನಗರದ 6, ಬಳ್ಳಾರಿ ತಾಲ್ಲೂಕಿನ ರೂಪನಗುಡಿಯ 3 ಮತ್ತು ಚಾಗನೂರಿನ ಇಬ್ಬರಿಗೆ ಸೋಂಕು ತಗುಲಿದೆ.