Publish Date: Wed, 04 Oct 2023 (17:00 IST)
Updated Date: Wed, 04 Oct 2023 (15:58 IST)
ಇನ್ನ ೧೦ ದಿನಗಳ ಕಾಲ ಕರುನಾಡಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ.ಗುಜರಾತ್, ಮಹಾರಾಷ್ಟದಲ್ಲಿ ಇನ್ನ ಮುಂಗಾರಿನ ಸೂಚನೆ ನೀಡಲಾಗಿದೆ.ಅ.೧ರಿಂದ ಶುರುವಾಗಬೇಕಿದ್ದ ಹಿಗ್ಗರು ಇನ್ನ ನಿಧಾನವಾಗಿದೆ.ಕೊಡಗು, ಮೈಸೂರು, ಮಂಡ್ಯ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.ಅಕ್ಟೋಬರ್ ಪೂರ್ತಿ ಮಳೆ ಬರುವ ಸಾಧ್ಯತೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.ಬಂಗಾಳಕೊಲ್ಲಿ... ಅರಬ್ಬೀ ಸಮುದ್ರದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ.ಅಕ್ಟೋಬರ್ 10ರವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರವೂ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಉತ್ತಮ ಮಳೆ ಸಾಧ್ಯತೆ ಇದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಬಾಗಲಕೋಟೆ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು ಭರ್ಜರಿ ಮಳೆ ಸಾಧ್ಯತೆಯಾಗುವ ಸಾಧ್ಯತೆ ಇದೆ.