Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಡ್ಯ: ಕಳೆದ 3 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗುತ್ತಿದ್ದು ಕೆಆರ್ ಎಸ್ ಡ್ಯಾಮ್ ನಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.
ಮಳೆಯಿಲ್ಲದೇ ರೈತರು ಸಂಕಷ್ಟದಲ್ಲಿದ್ದರು. ಸೆಪ್ಟೆಂಬರ್ ನಿಂದ ಡ್ಯಾಮ್ ನಲ್ಲಿ ನೀರನ ಮಟ್ಟ ಕುಸಿದಿತ್ತು. ಜೊತೆಗೆ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಆತಂಕ ಎದುರಾಗಿತ್ತು.
ಇದೀಗ ಕೊಂಚ ಮಟ್ಟಿಗೆ ಮಳೆಯಾಗಿರುವುದರಿಂದ ನೀರಿನ ಮಟ್ಟ 100.36 ಅಡಿ ತಲುಪಿದೆ. ತಮಿಳುನಾಡಿನ ನೀರಿನ ಖ್ಯಾತೆ ನಡುವೆ ಒಳಹರಿವು ಕೊಂಚ ಮಟ್ಟಿಗೆ ಏರಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ.