Publish Date: Sat, 15 Apr 2023 (16:22 IST)
Updated Date: Sat, 15 Apr 2023 (16:10 IST)
ಕೋಲಾರದ ಕೆಜಿಎಫ್ನ ಬಿಜೆಪಿಯಲ್ಲಿ ಬಂಡಾಯ ಸ್ಫೋಟಗೊಂಡಿದೆ.. KGFನ ಬಿಜೆಪಿ ಟಿಕೆಟ್ ಅಶ್ವಿನಿ ಸಂಪಂಗಿಗೆ ದೊರೆತಿದ್ದು, ಟಿಕೆಟ್ ವಂಚಿತ ಮೋಹನ್ ಕೃಷ್ಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ.. ಒಂದು ಬಾರಿ ಸೋತಿರುವ ಅಶ್ವಿನಿಗೆ ಮತ್ತೊಂದು ಸಲ ಬಿಜೆಪಿ ಟಿಕೆಟ್ ನೀಡಲಾಗಿದ್ದು, ಟಿಕೆಟ್ ಆಕಾಂಕ್ಷಿಗಳಲ್ಲಿ ಆಕ್ರೋಶ ಸ್ಫೋಟಕ್ಕೆ ಕಾರಣವಾಗಿದೆ. ಸಂಸದ ಎಸ್.ಮುನಿಸ್ವಾಮಿ ಚಿತಾವಣೆಯಿಂದ ಟಿಕೆಟ್ ಕೈ ತಪ್ಪಿಸಲಾಗಿದೆ ಎಂದು ಟಿಕೆಟ್ ಆಕಾಂಕ್ಷಿಗಳು ಆರೋಪಿಸಿದ್ದು, ಕಾಂಗ್ರೆಸ್ಗೆ ಪರೋಕ್ಷವಾಗಿ ನೆರವಾಗಲು ಅಶ್ವಿನಿಗೆ ಮತ್ತೊಂದು ಸಲ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಮೋಹನ್ ಕೃಷ್ಣ ಚಿತ್ತ JDSನತ್ತ ಹೊರಳಿದ್ದು, ಸ್ಥಳೀಯ ಮುಖಂಡ ಮುನಿರತ್ನಂನಾಯ್ಡು ಜೊತೆ ಜೆಡಿಎಸ್ ವರಿಷ್ಠರ ಭೇಟಿಗೆ ಮೋಹನ್ ಕೃಷ್ಣ ನಿರ್ಧಾರ ಮಾಡಿದ್ದಾರಂತೆ.
geetha
Publish Date: Sat, 15 Apr 2023 (16:22 IST)
Updated Date: Sat, 15 Apr 2023 (16:10 IST)