Publish Date: Sat, 15 Apr 2023 (14:44 IST)
Updated Date: Sat, 15 Apr 2023 (14:44 IST)
ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದ ಎಲ್ಲೆಲ್ಲಿಯೂ ಐಪಿಎಲ್ ಜ್ವರ ಶುರುವಾಗಿದೆ. ಕ್ರಿಕೆಟ್ ಹಬ್ಬವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬೆಟ್ಟಿಂಗ್ ದಂಧೆಕೋರರು ಪಂದ್ಯ ನಡೆಯುವ ಕ್ರೀಡಾಂಗಣದಲ್ಲಿ ತೆರಳಿ ಮ್ಯಾಚ್ ನಡೆಯುವಾಗ ಲೈವ್ ಆಗಿ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರು ದಂಧೆಕೋರರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ವಿಶಾಂತ್, ಅಮರ್ ಜಿತ್ ಸಿಂಗ್, ಮೋಹಿತ್ ಬಾತ್ರಾ ಹಾಗೂ ದುಶ್ಯಂತ್ ಕುಮಾರ್ ಸೋನಿ ಎಂಬುವರನ್ನು ಬಂಧಿಸಲಾಗಿದೆ. ದಂಧೆಯ ಹಿಂದೆ ಹಲವರ ಕೈವಾಡವಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.ವ್ಯವಸ್ಥಿತವಾಗಿ ಪೂರ್ವ ಸಂಚು ರೂಪಿಸಿ ಮ್ಯಾಚ್ ವೀಕ್ಷಿಸುವ ನೆಪದಲ್ಲಿ ಕ್ರೀಡಾಂಗಣದಲ್ಲಿ ತೆರಳುತ್ತಿದ್ದ ಆರೋಪಿಗಳು ಕೂತು ಹೊರಗಿನ ವ್ಯಕ್ತಿಗಳೊಂದಿಗೆ ದಂಧೆ ನಡೆಸುತ್ತಿದ್ದರು. ಲೈವ್ ಮ್ಯಾಚ್ ಗೂ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಸಮಯಕ್ಕೂ ಕೆಲವು ಕ್ಷಣಗಳು ವ್ಯತ್ಯಾಸವಿದ್ದು ಇದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು ಪ್ರತಿ ಬಾಲ್ ಗೂ ಬೆಟ್ಟಿಂಗ್ ಕಟ್ಟಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಇದನ್ನ ತಿಳಿಯದ ಸಾರ್ವಜನಿಕರು ಆರೋಪಿಗಳು ತೋಡಿದ್ದ ಹಳ್ಳಕ್ಕೆ ಬೀಳುತ್ತಿದ್ದರು. ಈ ಬಗ್ಗೆ ಬಾತ್ಮೀಯದಾರರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಕಬ್ಬನ್ ಪಾರ್ಕ್ ಪೊಲೀಸರು ಕ್ರೀಡಾಂಗಣದಲ್ಲಿ 30ಕ್ಕಿಂತ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ.