Publish Date: Sun, 07 May 2023 (11:43 IST)
Updated Date: Sun, 07 May 2023 (11:46 IST)
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರಿನ ರೋಡ್ ಶೋಗೆ ಕೌಂಟ್ ಡೌನ್ ಶುರುವಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪ್ರಧಾನಿ ಮೋದಿ ಅವರ ಚುನಾವಣಾ ರೋಡ್ ಶೋ ನಡೆಯಲಿದ್ದು,
ಈಗಾಗಲೇ ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದಾರೆ. ಸಿಎಮ್ ಎಚ್ ರಸ್ತೆಯಲ್ಲಿ ಕಲಾತಂಡಗಳು ಹಾಜರಾಗಿದ್ದು, ಕೀಲು ಕುದುರೆ ನರ್ತನ, ತಮಟೆ ವಾದ್ಯಗಳ ಜಯಘೋಷ ಮೊಳಗುತ್ತಿದೆ.