Publish Date: Fri, 05 May 2023 (16:22 IST)
Updated Date: Fri, 05 May 2023 (17:32 IST)
ಬೆಂಗಳೂರಿನಲ್ಲಿ ಎರಡು ದಿನ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯಲಿದೆ.. ಶನಿವಾರ ಮತ್ತು ಭಾನುವಾರ ರೋಡ್ ಶೋ ನಿಗದಿ ಮಾಡಲಾಗಿದೆ.. ಶನಿವಾರ ಎರಡು ರೋಡ್ ಶೋ ನಿಗದಿ ಮಾಡಲಾಗಿತ್ತು. ಆದರೆ ಮಳೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ನಿಗದಿಯಾಗಿದ್ದ ರೋಡ್ ಶೋ ಭಾನುವಾರ ಬೆಳಗ್ಗೆಗೆ ನಿಗದಿ ಮಾಡಲಾಗಿದೆ.. ಶನಿವಾರ ಸಂಜೆ ನಿಗದಿಯಾಗಿದ್ದ ಮಾರ್ಗದಲ್ಲೇ ಭಾನುವಾರ ಬೆಳಗ್ಗೆ ರೋಡ್ ಶೋ ನಡೆಯಲಿದೆ.. ಶನಿವಾರ ಬೆಳಗ್ಗೆ ಈಗಾಗಲೇ ನಿರ್ಧಾರ ಆದಂತೆ ರೋಡ್ ಶೋ ನಡೆಯಲಿದೆ. ಶನಿವಾರ ಸಂಜೆ ಬದಲು ರವಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ತನಕ ಬೆಂಗಳೂರು ದಕ್ಷಿಣ ರೋಡ್ ಶೋ ನಡೆಯಲಿದೆ. ಬೆಂಗಳೂರು ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸ್ವತಃ ಪ್ರಧಾನಿ ಮೋದಿ ಸೂಚನೆ ಮೇರೆಗೆ ರೋಡ್ ಶೋ ಬದಲಾವಣೆ ಮಾಡಲಾಗಿದೆ.