Publish Date: Fri, 05 May 2023 (15:05 IST)
Updated Date: Fri, 05 May 2023 (15:07 IST)
2023ರ ವಿಧಾನಸಭಾ ಚುನಾವಣೆ ಹಿನ್ನೆಲೆ ಎಲ್ಲಾ ರಾಜಕೀಯ ಪಕ್ಷದ ಘಟಾನುಘಟಿ ನಾಯಕರು ಫುಲ್ ಹೈ ಅಲರ್ಟ್ ಆಗಿದ್ದಾರೆ.. ಪಕ್ಷದ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆ ಗೆಲ್ಲಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊನೆ ದಿನಗಳ ತಂತ್ರಗಾರಿಕೆ ನಡೆಸುತ್ತಿದ್ದಾರೆ.. ಒಂದು ವಾರ ಬೆಂಗಳೂರಲ್ಲೇ ಇದ್ದು ಬಿಜೆಪಿ ಗೆಲ್ಲಿಸಲು ಚಾಣಕ್ಯ ರಣತಂತ್ರ ರೂಪಿಸಿದ್ದಾರೆ.. BJP ರಾಷ್ಟ್ರೀಯ ಅಧ್ಯಕ್ಷ J.P.ನಡ್ಡಾ ತಂತ್ರ ಬೆನ್ನೆಲ್ಲೆ ಇದೀಗ ಚುನಾವಣಾ ಚಾಣಕ್ಯನಿಂದ ರಣತಂತ್ರ ಶುರುವಾಗಿದೆ.. ಮೇ 7ರ ತನಕ ರಾಜ್ಯದಲ್ಲೇ ವಾಸ್ತವ್ಯ ಹೂಡಿರುವ ಅಮಿತ್ ಶಾ, ತಮ್ಮದೇ ಆದ ತಂತ್ರಗಾರಿಕೆ ಮೂಲಕ ಮತ್ತೆ ಕಮಲ ಅರಳಿಸಲು ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ.. ಈ ವಾರ ಎಲ್ಲೆಲ್ಲಿ ಪಕ್ಷಕ್ಕೆ ಹಿನ್ನಡೆ ಇದೆ ಅಲ್ಲಿನ ನಾಯಕರ ಮೂಲಕ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಅಮಿತ್ ಶಾ ರಣತಂತ್ರ ರೂಪಿಸುತ್ತಿದ್ದಾರೆ.