Publish Date: Fri, 05 May 2023 (14:14 IST)
Updated Date: Fri, 05 May 2023 (17:21 IST)
PKPS ಸೊಸೈಟಿಗಳ ಮೂಲಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ರೈತರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಸವದಿ ವಿರುದ್ಧ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಕಿಡಿಕಾರಿದ್ದಾರೆ. ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, PKPS ಮೂಲಕ ರೈತರನ್ನು ಬೆದರಿಸಿ ಕಾಂಗ್ರೆಸ್ಗೆ ಮತ ಹಾಕಿ ಎಂದು ಬೆದರಿಸುತ್ತಿದ್ದಾರೆ ಎಂದು ಲಕ್ಷ್ಮಣ್ ಸವದಿ ಹೆಸರೇಳದೇ ಸವದಿ ವಿರುದ್ಧ ಗುಡುಗಿದ್ದಾರೆ. ಸವದಿ ಕಾಂಗ್ರೆಸ್ ಎಂಟ್ರಿಯಿಂದ ಶ್ರೀಮಂತ ಪಾಟೀಲ್ ಬೆದರಿದ್ದಾರೆಂದು ಹೇಳಲಾಗ್ತಿದ್ದು, ಇದೀಗ ಸವದಿ ವಿರುದ್ಧ ಆರೋಪಿಸಿ ಹೊಸ ದಾಳ ಉರುಳಿಸಿದ್ದಾರೆ.