Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗುತ್ತಿಗೆದಾರರ ಜತೆ ಶಾಸಕ ಆರ್ ಅಶೋಕ್ ಚರ್ಚೆ

ಗುತ್ತಿಗೆದಾರರ ಜತೆ ಶಾಸಕ ಆರ್ ಅಶೋಕ್ ಚರ್ಚೆ
bangalore , ಗುರುವಾರ, 10 ಆಗಸ್ಟ್ 2023 (20:31 IST)
ಬಿಬಿಎಂಪಿ ಗುತ್ತಿಗೆದಾರ ಹಣ ಬಿಡುಗಡೆ ವಿಳಂಬ ವಿಚಾರವಾಗಿ ಇಂದು ಶಾಸಕ ಆರ್ ಅಶೋಕ್ ಕಛೇರಿಗೆ ಬಿಬಿಎಂಪಿ ಗುತ್ತಿಗೆದಾರರು ಭೇಟಿ ನೀಡಿ ಚರ್ಚಿಸಿದ್ದಾರೆ. ಸರ್ಕಾರ ಪ್ರತಿ ಕೆಲಸದಲ್ಲೂ ಕೂಡ ನಮಗೆ ಕಮಿಷನಕೆಳುತ್ತಿದ್ದಾರೆ. ಹಿಗಾಗಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕಾಮಗಾರಿಗಳನ್ನು ತಡೆಹಿಡಿದಿದ್ದಾರೆ.ಹೀಗಾಗಿ ಗುತ್ತಿಗೆದಾರರಿಗೆ ಕಳೆದ 30 ವರ್ಷದಿಂದ ನಾವು ಗುತ್ತಿಗೆ ಕೆಲಸವನ್ನು ಮಾಡಿಕೊಂಡು ಬಂದಿದೆವೆ ಆದರೆ ಯಾವ ಸರ್ಕಾರದಲ್ಲೂ ನಮಗೆ ಇಂತ ಸಂಕಸ್ಟಯದುರಾಗಿರಲಿಲ್ಲ, ಹಿಗಾಗಿನೆ ಗುತ್ತಿಗೆಸಾರರೆಲ್ಲ ಸೇರಿ ರಾಜ್ಯಪಾಲರಿಗೆ ದಯಾ ಮರಣಕೊರಿ ಪತ್ರಕೊಟ್ಟಿದ್ದೆವೆ. ನಮ್ಮ ಹೋರಾಟಕ್ಕೆ ನಿವು ಕೂಡ ಸಹಕಾರ ನೀಡಬಡಕೆಂದು ಗುತ್ತಿಗೆದಾರರು ಬಿಜೆಪಿ ನಾಯಕರಿಗೆ  ಮನವಿ ಮಾಡಿದ್ದಾರೆ.

ಇನ್ನೂ ಸಭೆಬಳಿಕ ಮಾತನಾಡಿದ ಸಾಸಕ ಆರ್, ಅಶೋಕ್ ನಮ್ಮ ಮೇಲೆ 40% ಅಂತ ಸುಳ್ಳು, ನಿರಾಧಾರ ಆರೋಪ ಮಾಡಿ ಅಧಿಕಾರಕ್ಕೆ ಬಂದ್ದರಲ್ಲಾ, ಈಗ ನಿಮ್ಮ ಮೇಲೆ 15% ಕಮಿಷನ್ ಆರೋಪ ಮಾಡಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು ಎಂದು ಕಾಂಗ್ರೆಸ್ ಆರ್,ಅಶೋಕ್ ಪ್ರಶ್ನೆ ಮಾಡಿದ್ದಾರೆ. ಇದೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಆರ್. ಅಶೋಕ್ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ಪ್ರಶ್ನೆಳು ಎನ್ನೂ ಅಂತಾ ನೋಡೊದಾದ್ರೆ.

ಕಾಂಗ್ರೆಸ್ಗೆ ಶಾಸಕ ಆರ್. ಅಶೋಕ್ ಪ್ರಶ್ನೆ
1) ನೀವು ಕಮಿಷನ್ ಕೇಳಿಲ್ಲ ಅಂದರೆ ಗುತ್ತಿಗೆದಾರರು ಅಜ್ಜಯ್ಯನ ದೇವಸ್ಥಾನಕ್ಕೆ ಹೋಗಿ ಆಣೆ ಮಾಡಿ ಅಂತ ಸವಾಲು ಹಾಕಿದ್ದಾರೆ. ಈ ಸವಾಲನ್ನು ಒಪ್ಪಿಕೊಂಡಿಲ್ಲ ಯಾಕೆ?
2) ಕಮಿಷನ್ ದಂದೆ ಶುರುಮಾಡಿರುವುದು ಲೋಕಸಭೆ ಚುನಾವಣೆಗೆ ಫಂಡ್‌ ಸಂಗ್ರಹಕ್ಕಾ?
3) ಗುತ್ತಿಗೆದಾರರ ಹಿತಾಸಕ್ತಿ ಕಾಪಾಡುವುದಾಗಿ ಅಧಿಕಾರ ಹಿಡಿದು ಇದೀಗ ಅವರ ಕಡೆಗಣನೆ ಮಾಡುತ್ತಿರುವುದು ಎಷ್ಟು ಸರಿ?
4) ಬಿಬಿಎಂಪಿಯಲ್ಲಿ 2019-2023 ರವರೆಗೆ ನಡೆದಿರುವ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡ್ತಿದ್ದೀರಿ, ನೀವು ಪ್ರಾಮಾಣಿಕರಾಗಿದ್ದರೆ 2013 ರಿಂದಲೂ ತನಿಖೆ ಮಾಡಿ 
5) ಗುತ್ತಿಗೆದಾರರೆಲ್ಲರೂ ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆಸ್ ಬಳುವಳಿಗರ ಇವರು?
6) ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದರೆ ನಿಮ್ಮ ಬ್ರಾಂಡ್ ಬೆಂಗಳೂರು ಕಥೆ ಏನು?
7) 300 ಜನ ಗುತ್ತಿಗೆದಾರರು ದಯಾ ಮರಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಕಾಂಗ್ರೆಸ್‌ ಉತ್ತರ ಏನು?
8) ದೆಹಲಿಯಲ್ಲಿ ಮಂತ್ರಿಗಳ ಕರೆಸಿ ಸಭೆ ಮಾಡಿದ್ದು ಲೋಕಸಭಾ ಸೀಟ್ ಗೆಲ್ಲಿಸೋದಕ್ಕೋ ಅಥವಾ ಸೂಟ್‌ಕೇಸ್ ತುಂಬಿಸೋಕ್ಕೋ?
9) ಡಿ ಕೆ ಶಿವಕುಮಾರ್ ಅವರೇ ನಿಮ್ಮದು ಬ್ರಾಂಡ್ ಬೆಂಗಳೂರೋ ಅಥವಾ ಬ್ಲಾಕ್ ಬೆಂಗಳೂರೋ?
10) ಸಿಎಂ ಹಣ ಬಿಡುಗಡೆ ಮಾಡಿದ್ರೆ, ಡಿಸಿಎಂ ತಡೆ ಹಿಡಿದಿದ್ದಾರೆ ಹಾಗಾದರೆ ಹಣ ಬಿಡುಗಡೆ ಮಾಡಲು ಸಿ ಎಂ ಗೆ ವೇಣುಗೋಪಾಲ್ ಸೂಚನೆ ನೀಡಿದ್ರೆ ಸುರ್ಜೆವಾಲ ತಡೆನೀಡಲು ಸೂಚನೆ ನೀಡಿದ್ರಾ? 

ಹೀಗೆ ಸರ್ಕಾರಕ್ಕೆ ಶಾಸಕ ಆರ್, ಅಶೋಕ್ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ. ಇನ್ನೂ .ನಾನು ಕೂಡ 4 ಬಾರಿ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೇನೆ. ಒಂದು ಬಾರಿಯೂ ಕೂಡ ಹೀಗೆ ನಡೆದುಕೊಂಡಿಲ್ಲ. ಲೋಕಸಭಾ ಚುನಾವಣೆಗೆ ಕರ್ನಾಟಕವನ್ನು ಲೂಟಿ ಮಾಡ್ತಿದ್ದೀರಾ. ರಾಜ್ಯದಲ್ಲಿ ಸರಕಾರ ಬಂದು ಎರಡೇ ತಿಂಗಳಿಗೆ ಹಗರಣಗಳೇ  ಹೆಚ್ಚುತ್ತಿವೆ, ದಿನನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಟೀಕಿಸಿದರು. 2013ರಿಂದ ತನಿಖೆ ನಡೆಸಿ ನೀವೇನು ಸತ್ಯಹರಿಶ್ಚಂದ್ರರೇ ಎಂದು ಸರಕಾರಕ್ಕೆ ಅಶೋಕ್ ಸವಾಲೆಸೆದರು.

Share this Story:

Follow Webdunia kannada

ಮುಂದಿನ ಸುದ್ದಿ

29 ವರ್ಷದ ಗೌತಮ್ ಎಂಬ ಯುವಕ ನೇಣಿಗೆ ಶರಣು