Publish Date: Thu, 10 Aug 2023 (16:20 IST)
Updated Date: Thu, 10 Aug 2023 (16:21 IST)
ಮಾಧ್ಯಮದ ಮುಂದೆ ಯಾರು ಕಳುಸುತ್ತಿದ್ದಾರೆ ಅಂತ ಗೊತ್ತಿದೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ. ಗುತ್ತಿಗೆದಾರರು ವಿರೋಧ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಸದಾಶಿವನಗರದಲ್ಲಿ ಪ್ರತಿಕ್ರಿಯಿಸಿದ ಅವರು ಕಾನೂನು ಪ್ರಕಾರ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ.ಕೆಂಪಣ್ಣ ದೂರು ಕೊಟ್ಟಿದ್ದಾರೆ, ಅವರಿಗೆ ನ್ಯಾಯ ಒದಗಿಸಬೇಕು. ಕೆಲಸಕ್ಕೆ ನ್ಯಾಯ ಒದಗಿಸಬೇಕು, ಜನರಿಗೆ ನ್ಯಾಯ ಒದಗಿಸಬೇಕು.ಸರ್ಕಾರಕ್ಕೆ ನ್ಯಾಯ ಒದಗಿಸಬೇಕು.ಪ್ರಚಾರಕ್ಕೆ ಯಾರು ಬೇಕಾದ್ರು ಹೋಗಲಿ.ಡೆಲ್ಲಿಗೆ ಯಾರ ಕರಿತಾ ಇದ್ದಾರೆ ಅಂತ ಗೊತ್ತಿದೆ ನನಗೆ.ಬಂದು ಸ್ಟೇಟಮೆಂಟ್ ಕೋಡಿ ಅಂತ ಕರಿತಿದ್ದಾರೆ.ಎಲ್ಲ ಗೊತ್ತಿದೆ ನನಗೆ,ನಾವು ತನಿಖೆಗೆ ಆರ್ಡರ್ ಮಾಡಿದ್ದೇವೆ.ಅವರು ಮಾಡಿರುವ ಕಾಮಗಾರಿ ಪ್ರೂವ್ ಮಾಡಲಿ. ಯಾರೆಲ್ಲ ಪ್ರಾಮಾಣಿಕ ಕೆಲಸ ಮಾಡಿದ್ದಾರೆ.ಅವರಿಗೆಲ್ಲ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ