ಗುತ್ತಿಗೆದಾರರು ವಿರೋಧ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಕಾನೂನು ಪ್ರಕಾರ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಂಪಣ್ಣ ದೂರು ಕೊಟ್ಟಿದ್ದಾರೆ, ಅವರಿಗೆ ನ್ಯಾಯ ಒದಗಿಸಬೇಕು.ಕೆಲಸಕ್ಕೆ ನ್ಯಾಯ ಒದಗಿಸಬೇಕು, ಜನರಿಗೆ ನ್ಯಾಯ ಓದಗಿಸಬೇಕು.ಸರ್ಕಾರಕ್ಕೆ ನ್ಯಾಯ ಓದಗಿಸಬೇಕು.ಪ್ರಚಾರಕ್ಕೆ ಯಾರು ಬೇಕಾದ್ರು ಹೋಗಲಿ.ಡೆಲ್ಲಿಗೆ ಯಾರ ಕರಿತಾ ಇದ್ದಾರೆ ಅಂತ ಗೊತ್ತಿದೆ ನನಗೆ,ಬಂದ ಸ್ಟೇಟಮೆಂಟ್ ಕೋಡಿ ಅಂತ ಕರಿತಿದ್ದಾರೆ.ಪ್ರೆಸ್ ಮುಂದೆ ಯಾರು ಕಳುಸುತ್ತಿದ್ದಾರೆ ಅಂತ ಗೊತ್ತಿದೆ.ಎಲ್ಲ ಗೊತ್ತಿದೆ ನನಗೆ,ನಾವೇನು ತನಿಖೆ ಆರ್ಡರ್ ಮಾಡಿದ್ದೇವೆ.ಅವರು ಮಾಡಿರುವ ಕಾಮಗಾರಿ ಪ್ರೂವ್ ಮಾಡಲಿ.ಯಾರೆಲ್ಲ ಪ್ರಾಮಾಣಿಕ ಕೆಲಸ ಮಾಡಿದ್ದಾರೆ .ಅವರಿಗೆಲ್ಲ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ.