ಬೆಂಗಳೂರು: ಎಂಎಲ್ ಎ ಮುನಿರತ್ನ ವಿಕಾಸಸೌಧದಲ್ಲೂ ತನ್ನ ಮೇಲೆ ರೇಪ ಮಾಡಿದ್ದರು ಎಂದು ಸಂತ್ರಸ್ತ ಮಹಿಳೆ ಪೊಲೀಸರ ಮುಂದೆ ಹೇಳಿಕೆ ನೀಡುತ್ತಿದ್ದಂತೇ ಇತ್ತ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು ಶುದ್ಧೀಕರಣ ಪೂಜೆ ನಡೆಸಿದೆ.
ಮುನಿರತ್ನ ಮೇಲೆ ಮಹಿಳೆ ಮೇಲೆ ರೇಪ್, ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದ್ದು ಸದ್ಯಕ್ಕೆ ಅವರು ಬಂಧನದಲ್ಲಿದ್ದಾರೆ. ಎಸ್ಐಟಿ ಅವರ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ನಡುವೆ ಸಂತ್ರಸ್ತ ಮಹಿಳೆ ತನ್ನ ಮೇಲೆ ಮುನಿರತ್ನ ವಿಕಾಸಸೌಧ, ಸರ್ಕಾರೀ ಕಾರಿನಲ್ಲೂ ರೇಪ್ ಮಾಡಿದ್ದರು ಎಂದು ಆರೋಪಿಸಿದ್ದಳು.
ಮಹಿಳೆಯ ಹೇಳಿಕೆ ಬಹಿರಂಗವಾಗುತ್ತಿದ್ದಂತೇ ವಿಕಾಸಸೌಧದ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಬಿಜೆಪಿ ಶಾಸಕ ಕೃತ್ಯ ನಾಚಿಕೆಗೇಡು ಎಂದು ಛೀಮಾರಿ ಹಾಕಿದೆ. ವಿಕಾಸಸೌಧದಂತಹ ಪವಿತ್ರ ಸ್ಥಳ ಮುನಿರತ್ನರಿಂದಾಗಿ ಅಪವಿತ್ರವಾಗಿದೆ ಎಂದು ಕಾಂಗ್ರೆಸ್ ನಾಯಕರು ಆಪಾದಿಸಿದ್ದಾರೆ.
ಅಲ್ಲದೆ, ಪಂಚಗವ್ಯ ಹಾಕಿ ವಿಕಾಸಸೌಧದಲ್ಲಿ ಶುದ್ಧೀಕರಣ ಮಾಡುವ ಮೂಲಕ ಅಪಚಾರ ಪರಿಹರಿಸುವ ಕೆಲಸವನ್ನೂ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಶಾಸಕ ಮುನಿರತ್ನ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನಿರತ್ನ ಸದ್ಯಕ್ಕೆ ಎಸ್ಐಟಿ ವಶದಲ್ಲಿದ್ದಾರೆ.