Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೂಗಲ್​​ನಲ್ಲಿ ಅತೀ ಹೆಚ್ಚು ಸರ್ಚ್ ಆದ ಮಿಸ್​ ಇಂಡಿಯಾ

ಗೂಗಲ್​​ನಲ್ಲಿ ಅತೀ ಹೆಚ್ಚು ಸರ್ಚ್ ಆದ ಮಿಸ್​ ಇಂಡಿಯಾ
bangalore , ಬುಧವಾರ, 6 ಜುಲೈ 2022 (14:30 IST)
ಫೆಮಿನಾ ಮಿಸ್ ಇಂಡಿಯಾ 2022ರ ಕಿರೀಟ ಧರಿಸಿದ ಸಿನಿ ಶೆಟ್ಟಿ ಕರ್ನಾಟಕ ಮೂಲದವರು ಎಂದು ಗೊತ್ತಾಗುತ್ತಿದ್ದಂತೆಯೇ ಗೂಗಲ್​​ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದಾರೆ. ಕರ್ನಾಟಕದ ಮೂಲದ ಸಿನಿ ಶೆಟ್ಟಿ ಭಾನುವಾರ ಫೆಮಿನಾ ಮಿಸ್ ಇಂಡಿಯಾ 2022ರ ಕಿರೀಟ ಧರಿಸುವ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ.ಯಾರು ಈ ಸಿನಿ ಶೆಟ್ಟಿ? ಯಾವ ಊರಿನವರು? ಎಂಬ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ನೆಟಿಜನ್​ಗಳು ಅವರ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ್ರು.ಸಿನಿ ಶೆಟ್ಟಿಯ ಪೋಷಕರು ಮೂಲತ ಕರ್ನಾಟಕದ ಉಡುಪಿ ಜಿಲ್ಲೆಯವರು. ಆದರೆ, ಈ ತಾರೆ ಹುಟ್ಟಿ ಬೆಳೆದದ್ದು ಮಾತ್ರ ಮಹಾನಗರಿ ಮುಂಬೈನಲ್ಲಿ.ಇವರು ಮುಂಬೈನಲ್ಲಿ ಹುಟ್ಟಿ ಬೆಳೆದರೂ ಕೂಡಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು ಅನ್ನೋದು ಹೆಮ್ಮೆಯ ಸಂಗತಿ.

Share this Story:

Follow Webdunia kannada

ಮುಂದಿನ ಸುದ್ದಿ

‘ಕಾಳಿ’ಗೆ ಅವಮಾನ; ಚಿತ್ರ ಪ್ರದರ್ಶನ ಮಾಡದಂತೆ ಸೂಚನೆ