ಟೊರೊಂಟೊದಲ್ಲಿನ ಅಗಾ ಖಾನ್ ಮ್ಯೂಸಿಯಮ್ನಲ್ಲಿ ಪ್ರದರ್ಶಿಸಲಾದ ಸಾಕ್ಷ್ಯಚಿತ್ರ 'ಕಾಳಿ'ಯ ಪೋಸ್ಟರ್ನಲ್ಲಿ ದೇವಿಯ ಬಾಯಲ್ಲಿ ಸಿಗರೇಟ್ ಇರುವಂತೆ ಚಿತ್ರಿಸಿದ್ದರಿಂದ ಭಾರಿ ವಿವಾದಕ್ಕೆ ಒಳಗಾಗಿತ್ತು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆನಡದಲ್ಲಿನ ಭಾರತೀಯ ರಾಯಭಾರ ಕಚೇರಿಯು ಮಧ್ಯಪ್ರವೇಶಿಸಿದೆ. ಈ ಚಿತ್ರ ಕೆನಡ ರಿದಮ್ಸ್ ಆಫ್ ಕೆನಡ ಭಾಗವಾಗಿ ಅಗಾ ಖಾನ್ ಮ್ಯೂಸಿಯಮ್ನಲ್ಲಿ ಪ್ರದರ್ಶನಗೊಳ್ಳಲಿರುವುದರಿಂದ ಅಲ್ಲಿರುವ ಹಿಂದುಗಳೂ ಧ್ವನಿ ಎತ್ತಿದ್ದಾರೆ. ಹೀಗಾಗಿ ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ. ಕಾಳಿ ಚಿತ್ರದಲ್ಲಿ ಹಿಂದು ದೇವತೆಯನ್ನು ಆಕ್ಷೇಪಾರ್ಹವಾಗಿ ತೋರಿಸಿರುವ ಕುರಿತು ಕೆನಡದಲ್ಲಿರುವ ಹಿಂದು ಸಮುದಾಯದವರಿಂದ ನಮಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಅಂಥ ಪ್ರಚೋದನಾತ್ಮಕ ಸಾಕ್ಷ್ಯಚಿತ್ರ ಹಿಂಪಡೆಯುವಂತೆ ಕಾರ್ಯಕ್ರಮ ಸಂಯೋಜಕರಿಗೆ ಹಾಗೂ ಕೆನಡದ ಆಡಳಿತದವರಿಗೆ ತಿಳಿಸಲಾಗಿದೆ ಎಂಬುದಾಗಿ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.