Publish Date: Thu, 23 Apr 2020 (09:27 IST)
Updated Date: Thu, 23 Apr 2020 (09:29 IST)
ಮೈಸೂರು : ರಾಜ್ಯದ ಹಲವೆಡೆ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಆದರೆ ಮೈಸೂರಿನಲ್ಲಿ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮೈಸೂರು ರೆಡ್ ಜೋನ್ ನಲ್ಲಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಇಲ್ಲ. ಮೇ 3ರವರೆಗೆ ಲಾಕ್ ಡೌನ್ ಯಥಾಪ್ರಕಾರ ಇರಲಿದೆ. ಮೇ 3ರಂದು ಮತ್ತೆ ಸಭೆ ನಡೆಸಿ ಸಡಿಲಿಕೆ ಬಗ್ಗೆ ನಿರ್ಧಾರ ಮಾಡಲಾಗುವುದು. ಕಟ್ಟಡ ಕಾರ್ಮಿಕರು ಕೆಲಸ ಮಾಡಬಹುದು. ಆದರೆ ಅವರು ಮೈಸೂರು ಜಿಲ್ಲೆಯವರು ಆಗಿರಬೇಕು ಎಂದು ತಿಳಿಸಿದ್ದಾರೆ.