Publish Date: Wed, 22 Apr 2020 (16:18 IST)
Updated Date: Wed, 22 Apr 2020 (16:21 IST)
ಕೊರೊನಾ ವೈರಸ್ ತಡೆ ನಿಟ್ಟಿನಲ್ಲಿ ಜಾರಿಯಾಗಿರುವ ಲಾಕ್ ಡೌನ್ ಸಡಿಲಿಕೆಗೆ ಸರಕಾರ ಮುಂದಾಗಿದೆ. ಆದರೆ ರೆಡ್ ಝೋನ್ ಗಳಲ್ಲಿ ಹಾಗೂ ಕಂಟೈನ್ ಮೆಂಟ್ ಏರಿಯಾಗಳಲ್ಲಿ ನೀವು ಇದ್ದರೆ ಯಾವುದೇ ವಿನಾಯಿತಿ ಇರೋದಿಲ್ಲ.
ಲಾಕ್ ಡೌನ್ ತುಸು ಸಡಿಲಿಕೆಯಾದರೂ ನಿಮಗೆ ಸಾರಿಗೆ ಇಲಾಖೆ ಬಸ್ಸ್ ಗಳು ಸಿಗೋದಿಲ್ಲ. ಬೈಕ್ ಗಳಲ್ಲಿ ಬೇಕಾಬಿಟ್ಟಿ ಓಡಾಡುವಂತಿಲ್ಲ.
ಮೆಟ್ರೋ ರೈಲು ಸಂಚಾರ, ವಿಮಾನ ಪ್ರಯಾಣ ಮೇ 3 ರ ನಂತರ ಅವಕಾಶ ಸಿಗೋದು, ಬಿಡೋದು ಗೊತ್ತಾಗುತ್ತದೆ.
ಇನ್ನು, ಏರಿಯಾಗಳಲ್ಲಿರುವ ಸಣ್ಣಪುಟ್ಟ ಹೋಟೆಲ್ ಗಳು ತೆರೆದಿರೋದಿಲ್ಲ. ಸಲೂನ್ ಶಾಪ್ ಗಳು ಬಂದ್ ಆಗಿರಲಿವೆ.
ಎಣ್ಣೆ ಪ್ರಿಯರಿಗೆ ಮೇ 3 ರವರೆಗೆ ಮದ್ಯ ಸಿಗೋದಿಲ್ಲ.