ಬ್ರಿಟನ್ : ಮಹಾಮಾರಿ ಕೊರೊನಾಗೆ ಬ್ರಿಟನ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಲಸಿಕೆ ಸಂಶೋಧನೆ ಮಾಡಿದ್ದು, ಇದನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲು ಅನುಮತಿ ಸಿಕ್ಕಿದೆ ಎಂಬುದಾಗಿ ತಿಳಿದುಬಂದಿದೆ.
CHADOXI ಹೆಸರಿನ ಲಸಿಕೆ ಸಂಶೋಧನೆ ಮಾಡಿದ್ದು, ಬ್ರಿಟನ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ 510 ಮತ್ತು ಜರ್ಮನಿಯ ಫೆಡರಲ್ ಸಂಸ್ಥೆ 200 ಆರೋಗ್ಯವಂತ ಜನರ ಮೇಲೆ ಈ ಕೊರೊನಾ ಲಸಿಕೆಯ ಪ್ರಯೋಗ ಮಾಡಲಿದ್ದಾರೆ ಎನ್ನಲಾಗಿದೆ.
ಈ ಲಸಿಕೆ ಯಶಸ್ಸು ಕಂಡ್ರೆ ಸೆಪ್ಟೆಂಬರ್ ನಲ್ಲಿ ಮಾರುಕಟ್ಟೆಗೆ ತರಲಾಗುವುದು.ಈ ಲಸಿಕೆ ಶೇ80ರಷ್ಟು ಯಶಸ್ವಿಯಾಗುವ ಸಾಧ್ಯತೆ ಇದೆ ಎಂದು ಆಕ್ಸ್ ಫರ್ಡ್ ಸಂಶೋಧನಾ ನಿರ್ದೇಶಕಿ ಪ್ರೊಫೆಸರ್ ಸಾರಾ ಗಿಲ್ಬರ್ಟ್ ಹೇಳಿದ್ದಾರೆ.