Publish Date: Tue, 06 Oct 2020 (18:09 IST)
Updated Date: Tue, 06 Oct 2020 (18:11 IST)
ಕೊರೊನಾ ಸೋಂಕು ತಡೆಗಟ್ಟುವಿಕೆಯಲ್ಲಿ ಮಾಸ್ಕ್ ಧರಿಸುವಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.
ರಾಜ್ಯದಲ್ಲಿ ಮಾಸ್ಕ್ ಧರಿಸದವರ ವಿರುದ್ದ ಕಠಿಣ ಕ್ರಮಕ್ಕೆ ಸಕಾ೯ರ ಮುಂದಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೊರೊನಾ ಸೋಂಕು ತಡೆಯಲು ಲಸಿಕೆ ಬರುವವರೆಗೂ ಮಾಸ್ಕ್ ಉತ್ತಮ ಮದ್ದು.
ಕನಾ೯ಟಕದಲ್ಲಿ ಪೊಲೀಸರು ಮಾಸ್ಕ್ ಧರಿಸದವರಿಗೆ ದಂಡ ಹಾಕುತ್ತಿದ್ದಾರೆ ಎಂದು ಹೇಳಿದರಲ್ಲದೇ, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜನರ ಸಹಕಾರ ಅಗತ್ಯ. ಜನ ಸಹಕರಿಸದೇ ಹೋದರೆ ಸೋಂಕು ತಡೆ ಖಂಡಿತಾ ಅಸಾಧ್ಯ ಎಂದೂ ಅನಿಸಿಕೆ ವ್ಯಕ್ತಪಡಿಸಿದ್ದಾರೆ.